Thursday, 12th December 2024

ಐಪಿಎಲ್ ಆಟಗಾರರು ಪ್ರಯಾಣಿಸುವ ಬಸ್ಸಿಗೆ ಹಾನಿ

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಬುಧ ವಾರ ಐಪಿಎಲ್ ಆಟಗಾರರನ್ನು ಕರೆ ತರುವ ಬಸ್ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ.

ಫೈವ್ ಸ್ಟಾರ್ ಹೋಟೆಲ್‌ ಮುಂದೆ ನಿಂತಿದ್ದ ಬಸ್ ಮೇಲೆ ತಮ್ಮ ಭಿತ್ತಿಪತ್ರ ಅಂಟಿಸಿದ ಕಾರ್ಯಕರ್ತರು ಬಳಿಕ ಗಾಜು ಒಡೆದಿದ್ದಾರೆ.

ಮಾ.26ರಿಂದ ಐಪಿಎಲ್ ಹಬ್ಬ ಶುರುವಾಗಲಿದೆ. ಮುಂಬೈ ಹಾಗೂ ಪುಣೆಯಲ್ಲಿ ಎಲ್ಲಾ ಪಂದ್ಯಗಳು ನಡೆಯಲಿವೆ. ಪಂದ್ಯಕ್ಕೆ ಎಲ್ಲ ತಯಾರಿ ಶುರುವಾಗಿದೆ. ಈ ಮಧ್ಯೆ ಆಟಗಾರರ ರಕ್ಷಣೆ ಸವಾಲಾಗಿದೆ. ಮುಂಬೈ ಹೊಟೇಲ್ ಗೆ ಆಟಗಾರರು ಬಂದು ಸೇರುತ್ತಿದ್ದಾರೆ.

ಆಟಗಾರರನ್ನು ಕರೆ ತರಲು ಹೊರ ರಾಜ್ಯಗಳ ಬಸ್ ಬಾಡಿಗೆಗೆ ಪಡೆಯಲಾಗುತ್ತಿದೆ. ಸ್ಥಳೀಯರು ಉದ್ಯೋಗದಿಂದ ವಂಚಿತ ರಾಗ್ತಿದ್ದಾರೆಂದು ಕಾರ್ಯಕರ್ತರು ಆರೋಪ ಮಾಡಿದ್ದಾರೆ. ದೆಹಲಿ ಸೇರಿದಂತೆ ಬೇರೆ ಭಾಗಗಳಿಂದ ಬಸ್ ಹಾಗೂ ವಾಹನವನ್ನು ಬಾಡಿಗೆಗೆ ಪಡೆಯಲಾಗುತ್ತಿದೆ.

ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಘಟನೆ ಕೋಲಾಬಾ ಪ್ರದೇಶದಲ್ಲಿರುವ ತಾಜ್ ಪ್ಯಾಲೇಸ್ ಎಂಬ ಹೋಟೆಲ್‌ ಮುಂದೆ ನಡೆದಿದೆ.