ಇತ್ತೀಚಿನ ದಿನಗಳಲ್ಲಿ ಕತ್ತೆ ಹಾಲಿಗೆ ಭಾರಿ ಬೇಡಿಕೆ ಉಂಟಾಗಿದೆ. ಕತ್ತೆಗಳನ್ನು (Donkey milk) ಸಾಕಿ, ಅವುಗಳ ಹಾಲು ಮಾರಾಟದಿಂದ (Business Idea) ತಿಂಗಳಿಗೆ ಲಕ್ಷ ಲಕ್ಷ ರೂಪಾಯಿ ಆದಾಯಗಳಿಸಬಹುದು. ಇದಕ್ಕಾಗಿ ಕೊಂಚ ಬಂಡವಾಳದೊಂದಿಗೆ, ಕೊಂಚ ಶ್ರಮ ಹಾಕಿದರೆ ಸಾಕು.
ಹಸು, ಆಡು, ಎಮ್ಮೆ ಮತ್ತು ಕುರಿಗಳಂತೆಯೇ ಕತ್ತೆ ಹಾಲು ಕೂಡ ಮಾರುಕಟ್ಟೆಯಲ್ಲಿ(donkey milk market) ಲಭ್ಯವಿದೆ. ಹಸು ಮತ್ತು ಎಮ್ಮೆಗಳಿಗೆ ಹೋಲಿಸಿದರೆ ಕತ್ತೆಯ ಹಾಲು ಹೆಚ್ಚು ಪ್ರಯೋಜನಗಳನ್ನು ಹೊಂದಿದೆ ಎಂಬುದು ಸಂಶೋಧನೆಗಳಿಂದಲೂ ಸಾಬೀತಾಗಿದೆ.
ಕತ್ತೆ ಹಾಲು ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿರುವುದು ಮಾತ್ರವಲ್ಲ ಇತರ ಪ್ರಾಣಿಗಳ ಹಾಲಿಗೆ ಹೋಲಿಸಿದರೆ ಕತ್ತೆ ಹಾಲು ಹೆಚ್ಚಿನ ಪೌಷ್ಟಿಕಾಂಶವನ್ನು ಹೊಂದಿದೆ.
ಸೌಂದರ್ಯವರ್ಧಕಗಳಲ್ಲೂ ಬಳಕೆಯಾಗುವ ಕತ್ತೆ ಹಾಲಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯೂ ಲಭ್ಯವಿದೆ. ಕತ್ತೆ ಹಾಲಿಗೆ ಮಾರುಕಟ್ಟೆಯಲ್ಲಿ ನಿರೀಕ್ಷೆಗೂ ಮೀರಿದ ದರವಿದೆ. ಕೆ.ಜಿ.ಗೆ 5 ಸಾವಿರ ರೂ.ಗೆ ಕತ್ತೆ ಹಾಲು ಮಾರಾಟವಾಗುತ್ತಿದೆ. ಕತ್ತೆಗಳು ಅಲ್ಪ ಪ್ರಮಾಣದ ಹಾಲನ್ನು ಉತ್ಪಾದಿಸುತ್ತವೆ. ಇತರ ಪ್ರಾಣಿಗಳ ಹಾಲಿಗೆ ಹೋಲಿಸಿದರೆ ಈ ಹಾಲು ಹೆಚ್ಚು ಅವಧಿ ಬಾಳಿಕೆ ಬರುತ್ತದೆ.
ಪ್ರಸ್ತುತ ಭಾರತದಲ್ಲೂ ಕತ್ತೆ ಹಾಲಿಗೆ ಹೆಚ್ಚಿನ ಬೇಡಿಕೆ ಇದೆ. ರಾಜಸ್ಥಾನ ಮತ್ತು ಗುಜರಾತ್ನಂತಹ ಸ್ಥಳಗಳಲ್ಲಿ ಅನೇಕ ವ್ಯಕ್ತಿಗಳು ಕತ್ತೆ ಹಾಲಿನ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಖರಾಣಿ ತಳಿಯ ಕತ್ತೆ ಹಾಲು ರಾಜಸ್ಥಾನದಲ್ಲಿ ಪ್ರಸಿದ್ಧವಾಗಿದೆ. ಈ ಮಧ್ಯೆ, ಗುಜರಾತ್ನಲ್ಲಿ ಹಲಾರಿ ಕತ್ತೆ ಹಾಲಿಗೆ ಹೆಚ್ಚಿನ ಬೇಡಿಕೆಯಿದೆ.
ಕತ್ತೆ ಹಾಲಿನ ವ್ಯಾಪಾರ ಪ್ರಾರಂಭ ಹೇಗೆ?
ಕತ್ತೆ ಹಾಲಿನ ವ್ಯಾಪಾರವನ್ನು ಪ್ರಾರಂಭಿಸಲು ಸ್ವಲ್ಪ ಜಮೀನು ಮತ್ತು ಸರಿಸುಮಾರು 5ರಿಂದ 10 ಕತ್ತೆಗಳು ಬೇಕಾಗುತ್ತವೆ. ಇದಲ್ಲದೆ ಒಂದು ಅಥವಾ ಎರಡು ಗಂಡು ಕತ್ತೆಗಳನ್ನು ಹೊಂದುವುದು ಕೂಡ ಮುಖ್ಯ.
ಕತ್ತೆಗಳು ದಿನಕ್ಕೆ 250ರಿಂದ 500 ಗ್ರಾಂ ಹಾಲು ನೀಡುತ್ತವೆ. ಪ್ರಸ್ತುತ ಹಲವಾರು ಸೌಂದರ್ಯವರ್ಧಕ ಕಂಪೆನಿಗಳು ಉನ್ನತ ಗುಣ ಮಟ್ಟದ ಕತ್ತೆಯ ಹಾಲನ್ನು ಖರೀದಿಸುತ್ತಿವೆ. ಆ ಕಂಪನಿಗಳೊಂದಿಗೆ ಸಂಪರ್ಕ ಸಾಧಿಸಿ ಹಾಲು ವ್ಯವಹಾರ ನಡೆಸಬಹುದು.
ಗುಜರಾತ್ನ ಪಟಾನ್ನಲ್ಲಿ ಹಲವಾರು ಹೆಣ್ಣು ಕತ್ತೆಗಳನ್ನು ಸಾಕಿದ ಅನಂತರ ಧೀರೇನ್ ಹಾಲು ಮಾರಾಟ ಮಾಡಲು ಪ್ರಾರಂಭಿಸಿದರು. ಧೀರೇನ್ ಉದ್ಯೋಗದ ಹುಡುಕಾಟದಲ್ಲಿದ್ದರು. ಜೀವನೋಪಾಯಕ್ಕಾಗಿ ಕತ್ತೆ ಹಾಲಿನ ವ್ಯಾಪಾರ ಪ್ರಾರಂಭಿಸಿದರು. ಇದಕ್ಕಾಗಿ ತಮ್ಮ ಹಳ್ಳಿಯಲ್ಲಿ ಡಂಕಿ ಕಂಪೆನಿಯನ್ನು ಸ್ಥಾಪಿಸಿದರು. ಆರಂಭದಲ್ಲಿ ಅವರು 20 ಕತ್ತೆಗಳನ್ನು ಸಾಕಲು ತೊಡಗಿದರು. ಅವುಗಳ ಸಂಖ್ಯೆ ಈಗ 42ಕ್ಕೆ ಏರಿದೆ.
Fixed Deposits: ಸ್ಥಿರ ಠೇವಣಿ; ಯಾವ ಬ್ಯಾಂಕ್ನಲ್ಲಿ ಎಷ್ಟಿದೆ ಬಡ್ಡಿ?
ಕರ್ನಾಟಕ ಮತ್ತು ಕೇರಳ ರಾಜ್ಯಕ್ಕೂ ಕತ್ತೆ ಹಾಲಿನ ಪ್ರಾಥಮಿಕ ಪೂರೈಕೆದಾರರಾಗಿರುವ ಧೀರೇನ್ ಅವರೊಂದಿಗೆ ಅನೇಕ ಕಾಸ್ಮೆಟಿಕ್ ಕಂಪೆನಿಗಳು ಒಪ್ಪಂದ ಮಾಡಿಕೊಂಡಿವೆ.