ಅಶೋಕನಗರ: ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಮುಖಿಯಾಗಿದೆ. ಪ್ರಸ್ತುತ ಒಂದು ಕೆಜಿ ಟೊಮೆಟೊ 150ರಿಂದ 200 ರವರೆಗೆ ಮಾರಾಟವಾಗುತ್ತಿದೆ.
ಮಧ್ಯಪ್ರದೇಶದ ಅಶೋಕ್ ನಗರದ ಮೊಬೈಲ್ ಶೋರೂಮ್ನಲ್ಲಿ ಇಂತಹ ಒಂದು ವಿಶೇಷ ಘಟನೆ ವರದಿಯಾಗಿದೆ. ಸ್ಮಾರ್ಟ್ ಫೋನ್ ಖರೀದಿಸುವ ಗ್ರಾಹಕರಿಗೆ 2 ಕೆಜಿ ಟೊಮೆಟೊ ಉಚಿತವಾಗಿ ನೀಡಲಾಗುತ್ತಿದೆ.
ಇದನ್ನೆಲ್ಲ ಪರಿಗಣಿಸಿ ಮೊಬೈಲ್ ಅಂಗಡಿಯವ ಅಭಿಷೇಕ್ ಅಗರ್ವಾಲ್ ತಮ್ಮ ಗ್ರಾಹಕ ರಿಗಾಗಿ ವಿಶೇಷ ಯೋಜನೆಯೊಂದನ್ನು ನೀಡಿದ್ದಾರೆ. ಸ್ಮಾರ್ಟ್ಫೋನ್ ಖರೀದಿಸುವಾಗ 2 ಕೆಜಿ ಟೊಮ್ಯಾಟೊ ಉಡುಗೊರೆಯಾಗಿ ನೀಡಲಾಗುತ್ತಿದೆ. ಈ ಯೋಜನೆ ಜಾರಿಯಾದ ಕೂಡಲೇ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತಾರೆ ಅಂಗಡಿಯವರು.
ಇದರಿಂದಾಗಿ ಹೆಚ್ಚು ಮೊಬೈಲ್ ಮಾರಾಟ ಮಾಡುತ್ತಿದ್ದು, ಅದೇ ಸಮಯದಲ್ಲಿ ಟೊಮೆಟೊ ಉಚಿತವಾಗಿ ನೀಡುವುದರಿಂದ ಗ್ರಾಹಕರೂ ಖುಷಿಯಾಗಿದ್ದಾರೆ. ಮಳೆಗಾಲ ದಲ್ಲಿ ಟೊಮೆಟೊ ಬೆಳೆ ನಾಶವಾಗಿದೆ. ಇಂದೋರ್ನಿಂದ ಅಶೋಕನಗರಕ್ಕೆ ಸಾರಿಗೆ ದರ ಹೆಚ್ಚಿದೆ. ಇದರ ಬೆನ್ನಲ್ಲೆ ಟೊಮೆಟೊ ದರ ಕೆಜಿಗೆ 120ರಿಂದ 160 ರೂ.ಗೆ ಏರಿಕೆಯಾಗಿದೆ ಎನ್ನುತ್ತಾರೆ ಗ್ರಾಹಕ ಕೃಷ್ಣ.
ಪೆಟ್ರೋಲ್ ಬೆಲೆಗಿಂತಲೂ ಟೊಮೆಟೊ ಬಲು ದುಬಾರಿ ಆಗಿದೆ. ಮಾರುಕಟ್ಟೆಗಳಲ್ಲಿ ಲಭ್ಯವಾಗುವ ಎಲ್ಲ ತರಕಾರಿಗಳಲ್ಲೇ ಟೊಮೆಟೊ ಬೆಲೆ ತುಂಬಾ ಏರಿಕೆ ಕಂಡಿದೆ. ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ಮೆಕ್ಡೊನಾಲ್ಡ್ ಕೇಂದ್ರದಲ್ಲಿ ಟೊಮೆಟೊವನ್ನು ತಮ್ಮ ತಿನಿಸುಗಳಿಗೆ ಬಳಕೆ ಮಾಡಲಾಗುತ್ತಿಲ್ಲ.