Thursday, 21st November 2024

By Elections Date: 14 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ದಿನಾಂಕ ಮುಂದೂಡಿಕೆ

By election

ನವದೆಹಲಿ: ಚುನಾವಣಾ ಆಯೋಗ(Election Commission)ವು ಕೇರಳ, ಪಂಜಾಬ್ ಮತ್ತು ಉತ್ತರ ಪ್ರದೇಶದ 14 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು(By Elections Date) ಮುಂದೂಡಿದೆ. ಈ ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ 13ರ ಬದಲಾಗಿ ನವೆಂಬರ್ 20 ರಂದು ಮತದಾನ ನಡೆಯಲಿದೆ. ವಿವಿಧ ಹಬ್ಬಗಳ ಕಾರಣದಿಂದ ಮತದಾನದ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಕೇರಳದ ಪಾಲಕ್ಕಾಡ್, ಪಂಜಾಬ್‌ನ ಡೇರಾ ಬಾಬಾ ನಾನಕ್, ಚಬ್ಬೇವಾಲ್, ಗಿಡ್ಡರ್ಬಹಾ, ಬರ್ನಾಲಾ ಹಾಗೂ ಉತ್ತರ ಪ್ರದೇಶದ ಮೀರಾಪುರ್, ಕುಂದರ್ಕಿ, ಗಾಜಿಯಾಬಾದ್, ಖೈರ್, ಕರ್ಹಾಲ್, ಸಿಶಾಮೌ, ಫುಲ್ಪುರ್, ಕತೇಹಾರಿ ಮತ್ತು ಮಜವಾನ್ ಕ್ಷೇತ್ರಗಳಲ್ಲಿ ನವೆಂಬರ್‌ 20ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪತ್ರಿಕಾ ಹೇಳಿಕೆಯಲ್ಲಿ, ಇಸಿಐ, “ಕೆಲವು ಅಸೆಂಬ್ಲಿ ಕ್ಷೇತ್ರಗಳಲ್ಲಿ ಚುನಾವಣಾ ದಿನಾಂಕ ಬದಲಾವಣೆಗಾಗಿ ವಿವಿಧ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳು (ಬಿಜೆಪಿ, ಐಎನ್‌ಸಿ, ಬಿಎಸ್‌ಪಿ, ಆರ್‌ಎಲ್‌ಡಿ ಸೇರಿದಂತೆ) ಮತ್ತು ಕೆಲವು ಸಾಮಾಜಿಕ ಸಂಸ್ಥೆಗಳಿಂದ ಮನವಿ ಬಂದಿದೆ. 13ನೇ ನವೆಂಬರ್ 2024 ರಂದು ದೊಡ್ಡ ಪ್ರಮಾಣದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು, ಹಬ್ಬಗಳು ಇವೆ. ಇದರಿಂದಾಗಿ ಮತದಾನ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧತೆ ಇರುವ ಕಾರಣ ಈ ಚುನಾವಣೆಯನ್ನು ಮುಂದೂಡಲಾಗಿದೆ. ಇನ್ನು ಮತ ಎಣಿಕೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಇಡೀ ದೇಶಾದ್ಯಂತ ನವೆಂಬರ್‌ 23ರಂದೇ ಮತ ಎಣಿಕೆ ಕಾರ್ಯ ನಡೆಯಲಿದೆ

ಈ ಸುದ್ದಿಯನ್ನೂ ಓದಿ: Election Commission : ಮತಗಟ್ಟೆ ಸಮೀಕ್ಷೆಗಳ ವಿರುದ್ಧ ಚುನಾವಣಾ ಆಯೋಗ ಬೇಸರ; ಆತ್ಮಾವಲೋಕನಕ್ಕೆ ಕರೆ

ಭಾರತೀಯ ಚುನಾವಣಾ ಆಯೋಗವು ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆ(Assembly Elections 2024)ಗಳ ಜತೆಗೆ ಉಪಚುನಾವಣೆಗಳ ದಿನಾಂಕವನ್ನೂ(By poll Dates) ಘೋಷಿಸಿತ್ತು. ದೇಶಾದ್ಯಂತ ಒಟ್ಟು 47 ವಿಧಾನಸಭಾ ಕ್ಷೇತ್ರಗಳೊಂದಿಗೆ ಏಕೈಕ ಲೋಕಸಭಾ ಕ್ಷೇತ್ರ ವಯನಾಡ್‌ ಕೂಡ ಉಪ ಚುನಾವಣೆ ಎದುರಿಸುತ್ತಿದೆ. ಇನ್ನು ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 25 ಕೊನೆಯ ದಿನವಾಗಿದ್ದು, ಉಮೇದುವಾರಿಕೆ ಹಿಂಪಡೆಯಲು ಅಕ್ಟೋಬರ್ 30 ಕೊನೆಯ ದಿನಾಂಕವಾಗಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನಾಂಕದಂದು ಫಲಿತಾಂಶ ಪ್ರಕಟವಾಗಲಿದೆ. ಇನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ರಾಜೀನಾಮೆಯಿಂದ ತೆರವುಗೊಂಡಿರುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 13 ರಂದು ಬೈ ಎಲೆಕ್ಷನ್‌ ನಡೆಯಲಿದೆ.