Thursday, 21st November 2024

7 ವಿಧಾನಸಭಾ ಸ್ಥಾನಗಳಿಗೆ ಸೆಪ್ಟೆಂಬರ್ 5 ರಂದು ಉಪಚುನಾವಣೆ

ವದೆಹಲಿ: ದೇಶದ ಆರು ರಾಜ್ಯಗಳ 7 ವಿಧಾನಸಭಾ ಸ್ಥಾನಗಳಿಗೆ ಸೆಪ್ಟೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ. ಸೆಪ್ಟೆಂಬರ್ 8ರಂದು ಫಲಿತಾಂಶ ಹೊರಬೀಳಲಿದೆ.

ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕೇರಳ, ಜಾರ್ಖಂಡ್ ಮತ್ತು ಉತ್ತರಾಖಂಡದಲ್ಲಿ ತಲಾ ಒಂದು ಸ್ಥಾನ ಮತ್ತು ತ್ರಿಪುರಾದಲ್ಲಿ ಎರಡು ಸ್ಥಾನಗಳನ್ನು ಹೊಂದಿದೆ.

ಉತ್ತರ ಪ್ರದೇಶದ ಘೋಸಿ, ಉತ್ತರಾಖಂಡದ ಬಾಗೇಶ್ವರ, ಬಂಗಾಳದ ಧುಪ್ಗುರಿ, ಜಾರ್ಖಂಡ್ನ ದುಮ್ರಿ, ಕೇರಳದ ಪುತ್ತುಪಲ್ಲಿ, ತ್ರಿಪುರಾದ ಬಾಕ್ಸ್ನಗರ್ ಮತ್ತು ಧನಪುರದಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಜಗರ್ನಾಥ್ ಮಹತೋ ಅವರ ನಿಧನದಿಂದಾಗಿ ದುಮ್ರಿ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಉಮ್ಮನ್ ಚಾಂಡಿ ಅವರ ನಿಧನದಿಂದಾಗಿ ಕೇರಳದ ಪುತ್ತುಪಲ್ಲಿ ಕ್ಷೇತ್ರಕ್ಕೆ ಚುನಾವಣೆ ಅನಿವಾರ್ಯವಾಗಿತ್ತು. ಚಂದನ್ ಕುಮಾರ್ ದಾಸ್ ಅವರ ನಿಧನದಿಂದಾಗಿ ಉತ್ತರಾಖಂಡದ ಬಾಗೇಶ್ವರ್ ಸ್ಥಾನ ಮತ್ತು ವಿಷ್ಣು ಪದಾ ರೇ ಅವರ ನಿಧನದಿಂದಾಗಿ ಬಂಗಾಳದ ಧುಪ್ಗುರಿ ಸ್ಥಾನಕ್ಕೆ ಚುನಾವಣೆ ನಡೆಯುತಿದೆ. ದಾರಾ ಸಿಂಗ್ ಚೌಹಾಣ್ ಅವರ ರಾಜೀನಾಮೆಯಿಂದಾಗಿ ಉತ್ತರ ಪ್ರದೇಶದ ಘೋಸಿ ಸ್ಥಾನಕ್ಕೆ ಸೆಪ್ಟೆಂಬರ್ 5 ರಂದು ಚುನಾವಣೆ ನಡೆಯುತ್ತಿದೆ. ಪ್ರತಿಮಾ ಭೌಮಿಕ್ ಅವರ ರಾಜೀನಾಮೆಯಿಂದ ತ್ರಿಪುರಾದ ಧನಪುರ ಸ್ಥಾನ ಖಾಲಿಯಾಗಿದೆ.