Wednesday, 9th October 2024

ವಿದೇಶಕ್ಕೆ ತೆರಳಿ ಮಗಳಿಗೆ ಸರ್ಪ್ರೈಸ್ ನೀಡಿದ ತಂದೆ..!

ಹೈದರಾಬಾದ್: ಕೆನಡಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಗಳನ್ನು ಕಾಣಲು ಭಾರತೀಯ ವ್ಯಕ್ತಿಯೊಬ್ಬರು ಅಲ್ಲಿಗೆ ತೆರಳಿ ಅಚ್ಚರಿ ಮೂಡಿಸಿದ್ದಾರೆ.

ಮಗಳನ್ನು ಹೊರ ದೇಶದಲ್ಲಿ ಬಿಟ್ಟು ಹೋಗುವುದು ತಂದೆಗೆ ಸ್ವಲ್ಪ ಕಷ್ಟ. ಇಂತಹದ್ದೇ ಒಂದು ಘಟನೆ ಕೆನಡಾದಲ್ಲಿ ನಡೆದಿದೆ. ಕೆನಡಾದಲ್ಲಿ ವ್ಯಾಸಂಗ ಕ್ಕಾಗಿ ತೆರಳಿದ್ದ ಮಗಳನ್ನು ಒಂದೂವರೆ ವರ್ಷ ದಿಂದ ಕಾಣದ ತಂದೆ ಕಂಗಾಲಾಗಿದ್ದರು. ನಂತರ ಅವಳನ್ನು ಭೇಟಿಯಾಗಿ ಸಂತಸ ವ್ಯಕ್ತಪಡಿಸಿ ದ್ದಾರೆ.

ಮಗಳಿಗೆ ಸರ್ಪ್ರೈಸ್ ಕೊಡುವ ಉದ್ದೇಶದಿಂದ ತಂದೆ ಭಾರತ ಬಿಟ್ಟು ಕೆನಡಾಕ್ಕೆ ತೆರಳಿದ್ದರು. ತಂದೆ ಮಗಳು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಬಾಗಿಲಿನ ಮುಂದೆ ನಿಂತಿದ್ದಾರೆ. ಈ ಅನಿರೀಕ್ಷಿತ ಘಟನೆಯನ್ನು ಕಂಡ ಮಗಳು ಒಮ್ಮೆಲೆ ಕುಸಿದು ಹೋಗಿದ್ದಾಳೆ. ಅವರು ಒಬ್ಬರನ್ನೊಬ್ಬರು ತಬ್ಬಿ ಕೊಂಡು ಸಂತೋಷದಿಂದ ಕೂಗಿದ್ದಾರೆ. ತಂದೆ ಮತ್ತು ಮಗಳ ನಡುವಿನ ಸುಂದರ ಬಾಂಧವ್ಯದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಶ್ರುತ್ವಾ ದೇಸಾಯಿ ಎಂಬ ಯುವತಿ ತನ್ನ ಪದವಿಗಾಗಿ ಕೆನಡಾಕ್ಕೆ ಹೋಗಿದ್ದರು. ಸ್ಥಳೀಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾ ಅವಳು ತನ್ನ ಓದು ಮುಂದುವರಿಸುತ್ತಿದ್ದಾಳೆ. ವಿದೇಶಕ್ಕೆ ಹೋದವಳು ಒಂದು ವರ್ಷದಿಂದ ಮನೆಗೆ ಹಿಂದಿರುಗಿ ಬಂದಿರಲಿಲ್ಲ. ಆದ್ದರಿಂದ, ಅವಳ ತಂದೆ ಅಲ್ಲಿಗೆ ಹೋಗಲು ನಿರ್ಧರಿಸಿದ್ದರು. “ಹೇಗಿದ್ದರೂ ಹೋಗುತ್ತಿದ್ದೆ.. ಹಾಗಾಗಿ ಮಗಳಿಗೆ ಸರ್ಪ್ರೈಸ್ ಕೊಡುವ ಉದ್ದೇಶದಿಂದ ಮಗಳಿಗೆ ತಾವು ಕೆನಾಡಕ್ಕೆ ಬರುವ ವಿಚಾರವನ್ನು ಮಗಳಿಗೆ ಹೇಳಿರಲಿಲ್ಲ” ಎಂದಿದ್ದಾರೆ.

ತಂದೆಯನ್ನು ಕಂಡು ಶ್ರುತ್ವಾ ಸಂತೋಷದಿಂದ ಕಣ್ಣೀರು ಸುರಿಸಿದ್ದಾಳೆ. ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಕುಳಿತ್ತಿದ್ದಾಳೆ. ಈ ವೇಳೆ ತಂದೆ ಹತ್ತಿರ ಹೋಗಿ ಸಮಾಧಾನ ಪಡಿಸಿದ್ದಾರೆ.