Thursday, 3rd October 2024

ಯಾವುದೇ ವಿವಾದ ಸಂಘರ್ಷದಿಂದ ಬಗೆಹರಿಯಲ್ಲ: ಜಿ.ಸಿ ಚಂದ್ರಶೇಖರ್

ನವದೆಹಲಿ: ಯಾವುದೇ ವಿವಾದ ಸಂಘರ್ಷದಿಂದ ಬಗೆಹರಿಯುವುದಿಲ್ಲ ಎಂದು ಮಹಾರಾಷ್ಟ್ರ – ಕರ್ನಾಟಕ ಗಡಿ ವಿವಾದ ಕುರಿತಂತೆ ರಾಜ್ಯ ಸಭೆಯಲ್ಲಿ ಜಿ.ಸಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಗಾಂಧೀಜಿಯವರ ಅಹಿಂಸಾ ಸಂದೇಶ ಇಡಿ ಪ್ರಪಂಚಕ್ಕೆ ಮಾದರಿಯಾಗಿದೆ. 1956ರ ಕೇಂದ್ರವಾರು ಭಾಷಾವಾರು ವಿಂಗಡಣೆ ಆದಾಗಿನಿಂದಲೂ ಬೆಳಗಾವಿ ಕರ್ನಾಟಕದ ಅಂಗವಾಗಿದೆ. ಮಹಾಜನ ವರದಿಯಲ್ಲೂ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳಲಾಗಿದೆ.

ರಾಜಕೀಯ ಲಾಭಕ್ಕಾಗಿ ಗಡಿ ವಿವಾದ ಮಾಡುತ್ತಿದ್ದಾರೆ. ನವೆಂಬರ್ 1 ಕರಾಳ ದಿನವನ್ನಾಗಿ ಆಚರಣೆ ಮಾಡುತ್ತಿದ್ದಾರೆ. ಸಿಮಾ ಸಂಕಲ್ಪ ಎಂಬ ಹೆಸರಿನಲ್ಲಿ ಬೆಳಗಾವಿಯನ್ನ ವಶಪಡಿಸಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಇದರಿಂದ ಸ್ವಾಭಿಮಾನದ ನಮ್ಮ ರಾಜ್ಯ ಹೊತ್ತಿ ಉರಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.