Saturday, 14th December 2024

ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಕಾರು

ಪಣಜಿ: ದಕ್ಷಿಣ ಗೋವಾದಲ್ಲಿ ನಾಲ್ಕು ಜನರಿದ್ದ ಐಷಾರಾಮಿ ಕಾರು ಸೇತುವೆ ಯಿಂದ ಜುವಾರಿ ನದಿಗೆ ಬಿದ್ದ ಘಟನೆ ನಡೆದಿದೆ. ಭಾರತೀಯ ಕರಾವಳಿ ಪಡೆ, ನೌಕಾಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದ್ದಿ ಮತ್ತು ಪೊಲೀ ಸರು ವಾಹನ ಮತ್ತು ಅದರಲ್ಲಿದ್ದವರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

ಪಣಜಿಯಿಂದ ಸುಮಾರು 15 ಕಿಮೀ ದೂರದಲ್ಲಿರುವ ಕೊರ್ಟಾಲಿಮ್ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದೆ ಹೊಗುತ್ತಿದ್ದ ವಾಹನವನ್ನು ಔವರ್‍ಟೇಕ್ ಮಾಡಲು ಹೋಗಿ ಜುವಾರಿ ನದಿ ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರಿನಲ್ಲಿ ಕನಿಷ್ಠ ನಾಲ್ಕು ಜನರಿದ್ದರು ಮತ್ತು ಅದನ್ನು ಮಹಿಳೆ ಓಡಿಸುತ್ತಿದ್ದರು ಎಂದು ಹೇಳಿದ್ದಾರೆ. ಭಾರತೀಯ ನೌಕಾಪಡೆಯ ಈಜುಗಾರರು ಕೂಡ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸೇರಿಕೊಂಡಿದ್ದಾರೆ.