ಕಾರು ಖರೀದಿ (Buying a car) ಮಾಡಲು ಹೊರಡುವಾಗ ಸಾಲದ (Car Loan) ಬಗ್ಗೆಯೂ ಯೋಚಿಸಬೇಕು. ಯಾಕೆಂದರೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಾರುಗಳಿಗೆ ಏಕಕಾಲದಲ್ಲಿ ಅಷ್ಟು ಹಣ ಹೊಂದಿಸುವುದು ಕಷ್ಟ. ಹೀಗಾಗಿ ಹೆಚ್ಚಿನವರು ಸಾಲ ಮಾಡಿಯೇ ಕಾರು ಖರೀದಿ ಮಾಡುವ ಯೋಚನೆ ಮಾಡುತ್ತಾರೆ.
ಮನೆ, ಕಾರು ಖರೀದಿ ಒಂದು ಪ್ರಮುಖ ಆರ್ಥಿಕ ಆಯ್ಕೆಯಾಗಿರುತ್ತದೆ. ಇದು ನಮ್ಮ ಬಜೆಟ್ ಮೇಲೆ ದೊಡ್ಡ ಪರಿಣಾಮವನ್ನೇ ಬೀರಬಲ್ಲದು. ಸಾಲ ಮಾಡದೇ ಇದನ್ನು ಖರೀದಿ ಮಾಡುವುದು ಬಹುತೇಕ ಮಂದಿಗೆ ಅಸಾಧ್ಯವೇ ಆಗಿರುತ್ತದೆ. ಕಾರು ಖರೀದಿ ಮಾಡಲು ಧನಸಹಾಯ ಮಾಡುವ ಸಾಮಾನ್ಯ ವಿಧಾನವೆಂದರೆ ಸಾಲವನ್ನು ಪಡೆಯುವುದು. ಪ್ರಸ್ತುತ ಕಾರು ಸಾಲಗಳ ಬಡ್ಡಿ ದರಗಳು ಅತ್ಯಂತ ಕಡಿಮೆಯಾಗಿದೆ. ಆದರೆ
ಕಾರು ಸಾಲ ಪಡೆಯುವಾಗ ಕೆಲವೊಂದು ಅಂಶಗಳನ್ನು ಗಮನಿಸಬೇಕಾಗುತ್ತದೆ.
ಎಷ್ಟು ಸಾಲ ಪಡೆಯಬಹುದು?
ಬ್ಯಾಂಕು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪೆನಿಗಳು ಸಾಮಾನ್ಯವಾಗಿ ಕಾರಿನ ಆನ್ ರೋಡ್ ಬೆಲೆಯ ಸುಮಾರು ಶೇ. 80ರಷ್ಟು ಸಾಲವನ್ನು ನೀಡುತ್ತವೆ. ಕೆಲವರಿಗೆ ಕೆಲವು ಸಾಲದಾತರು ಕಾರಿನ ವೆಚ್ಚದ ಸಂಪೂರ್ಣ ಶೇ. 100ರಷ್ಟು ಸಾಲವನ್ನೂ ನೀಡುತ್ತಾರೆ.
ಕಾರಿನ ಸಾಲದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವೆಂದರೆ ಸಾಲದಾತನು ಮಾಡಿರುವ ಲೋನ್ ಟು ವ್ಯಾಲ್ಯೂ (LTV) ಅನುಪಾತ. ಈ ಅನುಪಾತವು ಸಾಲದಾತನು ಹಣಕಾಸು ನೀಡಲು ಸಿದ್ಧರಿರುವ ಕಾರಿನ ಒಟ್ಟು ವೆಚ್ಚದ ಶೇಕಡಾವಾರು ಅಥವಾ ಪಾಲನ್ನು ಸೂಚಿಸುತ್ತದೆ. ಬಹುತೇಕ ಕಾರು ಸಾಲ ನೀಡುವ ಸಂಸ್ಥೆಯು ಶೇ. 80ರಸ್ತು ಮಾತ್ರ ಲೋನ್ ಟು ವ್ಯಾಲ್ಯೂ ನೀಡುತ್ತದೆ. ಉಳಿದ ಮೊತ್ತವನ್ನು ಕಾರು ಖರೀದಿ ಮಾಡುವವರು ತಮ್ಮ ಸ್ವಂತ ಹಣಕಾಸಿನ ಸಂಪನ್ಮೂಲಗಳಿಂದ ಭರಿಸಬೇಕಾಗುತ್ತದೆ.
ಇಎಂಐ ಪಾವತಿಗಳು
ಕಾರು ಸಾಲ ಪಡೆಯುವಾಗ ಮರುಪಾವತಿ ಸಾಮರ್ಥ್ಯಕ್ಕೆ ಹೊಂದಿಕೆಯಾಗುವ ಸಮಾನ ಮಾಸಿಕ ಕಂತುಗಳನ್ನು (EMI) ಆಯ್ಕೆ ಮಾಡುವುದು ಬಹಳ ಮುಖ್ಯ. ಕಡಿಮೆ ಇಎಂಐ ಮೊತ್ತ ಮತ್ತು ಹೆಚ್ಚು ವಿಸ್ತೃತ ಸಾಲದ ಅವಧಿಯನ್ನು ಆಯ್ಕೆ ಮಾಡುವುದನ್ನು ತಪ್ಪಿಸಿ. ಯಾಕೆಂದರೆ ಅಂತಹ ನಿಯಮಗಳು ನಮ್ಮ ಹಣಕಾಸಿನ ಸಾಮರ್ಥ್ಯಗಳಿಗೆ ಹೊಂದಿಕೆಯಾದರೆ ಮಾತ್ರ ಆಯ್ಕೆ ಮಾಡಬಹುದು. ಕಡಿಮೆ ಇಎಂಐ ಮತ್ತು ದೀರ್ಘಾವಧಿಯ ಸಾಲ ಅನಗತ್ಯವಾಗಿ ಹೆಚ್ಚಿನ ಬಡ್ಡಿ ವೆಚ್ಚಗಳಿಗೆ ಕಾರಣವಾಗಬಹುದು.
ಅಗತ್ಯ ಹಣಕಾಸಿನ ಉದ್ದೇಶಗಳಿಂದ ಇಎಂಐ ಕಟ್ಟುವುದನ್ನು ತಪ್ಪಿಸಿ. ಲೋನ್ ಮೊತ್ತದ ಹೊರತಾಗಿ ಆರಾಮದಾಯಕವಾಗಿ ನಿರ್ವಹಿಸಬಹುದಾದ ಇಎಂಐಗಳಿಗೆ ಆದ್ಯತೆ ನೀಡುವುದು ಅತ್ಯಗತ್ಯ.
ಕಾರು ಲೋನ್ ಪಡೆಯಲು ಇದೆ ಸೂತ್ರ
20/04/10 ಹೊಸ ಕಾರನ್ನು ಖರೀದಿಸಲು ಇರುವ ಜನಪ್ರಿಯ ಸೂತ್ರವಾಗಿದೆ. ಇದರ ಪ್ರಕಾರ ಕಾರನ್ನು ಖರೀದಿಸುವಾಗ ನೀವು ಕನಿಷ್ಠ ಶೇ. 20ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಡೌನ್ ಪೇಮೆಂಟ್ ಆಗಿ ಪಾವತಿಸಬೇಕು. ಗರಿಷ್ಠ 4 ವರ್ಷಗಳ ಅವಧಿಗೆ ಸಾಲವನ್ನು ತೆಗೆದುಕೊಳ್ಳಬೇಕು. ಈ ಸಂದರ್ಭದಲ್ಲಿ ಕಾರಿಗೆ ಸಂಬಂಧಿಸಿದ ವೆಚ್ಚ ಮತ್ತು ಇಎಂಐ ಪಾವತಿಯು ಮಾಸಿಕ ಸಂಬಳದ ಶೇ.10 ಅನ್ನು ಮೀರಬಾರದು.
20/4/10 ನಿಯಮವನ್ನು ಸಾಲದ ಮೇಲೆ ಕಾರನ್ನು ಖರೀದಿಸುವಾಗ ಬಳಸಲಾಗುವ ಬಹುಮುಖ್ಯ ನಿಯಮ ಎಂದು ಪರಿಗಣಿಸಲಾಗಿದೆ. ವಾಹನವನ್ನು ಬುಕ್ ಮಾಡುವಾಗ ಕಾರಿನ ಆನ್‌ರೋಡ್ ಬೆಲೆಯ ಶೇ. 2.20ರಷ್ಟನ್ನು ಡೌನ್ ಪೇಮೆಂಟ್ ಆಗಿ ಪಾವತಿಸಬೇಕು. ಐಎಂಐ ಮಾಸಿಕ ಆದಾಯದ ಶೇ. 10ಕ್ಕಿಂತ ಹೆಚ್ಚಿರಬಾರದು. ಸಾಲದ ಅವಧಿಯು ಗರಿಷ್ಠ ನಾಲ್ಕು ವರ್ಷಗಳವರೆಗೆ ಇರಬೇಕು. ಈ ನಿಯಮವು ಅವರ ಮಾಸಿಕ ಆದಾಯ ಮತ್ತು ಇತರ ಹೊಣೆಗಾರಿಕೆಗಳ ಪ್ರಕಾರ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಎಂಬುದನ್ನು ಗಮನದಲ್ಲಿರಿಸಬೇಕು.
ಉದಾಹರಣೆಗೆ 15 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಖರೀದಿಸುತ್ತಿದ್ದರೆ ಕನಿಷ್ಠ 7 ಲಕ್ಷ ರೂಪಾಯಿಗಳ ಡೌನ್ ಪೇಮೆಂಟ್ ಮಾಡಲು ಉಳಿತಾಯ ಹಣವಿದೆಯೇ ಎಂಬುದನ್ನು ಗಮನಿಸಿ. ಉಳಿದ ಮೊತ್ತ ಅಂದರೆ 8 ಲಕ್ಷ ರೂ. ಗೆ ಸಾಲವನ್ನು ಆಯ್ಕೆ ಮಾಡಿಕೊಳ್ಳಿ. ಇದಕ್ಕಾಗಿ ಆರಾಮದಾಯಕ ಇಎಂಐ ಮೊತ್ತ ಯಾವುದು ಎಂಬುದನ್ನು ಪರಿಶೀಲಿಸಿ.
ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚಿದ್ದರೆ ಸಾಲದ ಮೊತ್ತ ಮತ್ತು ಉತ್ತಮ ಬಡ್ಡಿದರಗಳನ್ನು ಪಡೆಯಲು ಸಹಾಯವಾಗುತ್ತದೆ. 750ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವರಿಗೆ ಬ್ಯಾಂಕ್‌ಗಳು ಸಾಮಾನ್ಯವಾಗಿ ವಾಹನದ ಒಟ್ಟು ವೆಚ್ಚದ ಶೇ. 80ರಿಂದ 90ರಷ್ಟು ಬಡ್ಡಿ ಹಣವನ್ನು ಪಾವತಿಸುತ್ತದೆ.
ಒಂದು ವೇಳೆ ಹೆಚ್ಚಿನ ಲೋನ್ ಟು ವ್ಯಾಲ್ಯೂ ಅನುಪಾತಕ್ಕೆ ಅರ್ಹತೆ ಪಡೆದಿದ್ದರೂ ಕಡಿಮೆ ಲೋನ್ ಟು ವ್ಯಾಲ್ಯೂ ಅನುಪಾತವನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ಇಎಂಐ ಹೊರೆಯನ್ನು ಕಡಿಮೆ ಮಾಡಬಹುದು. ಕಾರು ಖರೀದಿಗೆ ಸಂಬಂಧಿಸಿದ ಒಟ್ಟಾರೆ ಬಡ್ಡಿ ವೆಚ್ಚಗಳನ್ನು ಕಡಿಮೆ ಮಾಡಬಹುದು.
PMs Internship Scheme: ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ ಜಾರಿ; ವರ್ಷಕ್ಕೆ 60,000 ರೂ. ಪಡೆಯುವ ಅವಕಾಶ!
ಕಾರು ಲೋನ್ ಗಾಗಿ ಇತರ ಹಣಕಾಸಿನ ಯೋಜನೆಗಳ ಮೇಲೆ ರಾಜಿ ಮಾಡಿಕೊಳ್ಳಬಾರದು ಎಂಬುದು ಇಲ್ಲಿ ಗಮನಿಸಬೇಕಿರುವ ಮಹತ್ವದ ಸಂಗತಿಯಾಗಿದೆ.