Thursday, 12th December 2024

ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ: ಆರು ಜನರ ಸಾವು

ಜೆಮ್ಷೆಡ್ಪುರ: ಜಾರ್ಖಂಡ್‌ನ ಜೆಮ್ಷೆಡ್ಪುರ ನಗರದಲ್ಲಿ ಸೋಮವಾರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಸ್ತುಪುರ್ ಪೊಲೀಸ್ ಠಾಣೆ ಪ್ರದೇಶದ ಸರ್ಕ್ಯೂಟ್ ಹೌಸ್ ಸ್ಕ್ವೇರ್ ಬಳಿ ಬೆಳಿಗ್ಗೆ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಐದು ಆಸನಗಳ ಕಾರಿನಲ್ಲಿ ಎಂಟು ಜನರು ಪ್ರಯಾಣಿಸುತ್ತಿದ್ದರು, ಅದು ಮೊದಲು ರಸ್ತೆ ವಿಭಜಕಕ್ಕೆ ಮತ್ತು ನಂತರ ರಸ್ತೆ ಬದಿಯ ಕಂಬಕ್ಕೆ ಡಿಕ್ಕಿ ಹೊಡೆ ದಿದೆ. ಅವರಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮೂವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಇನ್ನೂ ಒಬ್ಬರು ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜೆಮ್ಷೆಡ್ಪುರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕೌಶಲ್ ತಿಳಿಸಿದ್ದಾರೆ.