Thursday, 12th December 2024

ಕಾರಿಗೆ ಅಪರಿಚಿತ ವಾಹನ ಡಿಕ್ಕಿ: ಒಂದೇ ಕುಟುಂಬದ 6 ಮಂದಿ ಸಾವು

ಜೈಪುರ: ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ಕಾರೊಂದಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಒಂದೇ ಕುಟುಂಬದ 6 ಮಂದಿ ಸಾವಿಗೀಡಾಗಿದ್ದಾರೆ.

ಬನಾಸ್ ಸೇತುವೆಯ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇನಲ್ಲಿ ಈ ಅಪಘಾತ ಸಂಭವಿಸಿದೆ. ಸವಾಯಿ ಮಾಧೋಪುರದಲ್ಲಿ ಗಣೇಶ ದೇಗುಲದಲ್ಲಿ ಪೂಜೆಗಾಗಿ ಕುಟುಂಬ ಸದಸ್ಯರು ಕಾರಿನಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಅಪರಿಚಿತ ವಾಹನ ಕಾರಿಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ 6 ಮಂದಿ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ’ ಎಂದು ಬೊನ್ಲಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಧರಂಪಾಲ್ ಸಿಂಗ್ ತಿಳಿಸಿದ್ದಾರೆ.

ಮೃತರನ್ನು ಮನೀಶ್ ಶರ್ಮಾ ಮತ್ತು ಅವರ ಪತ್ನಿ ಅನಿತಾ, ಕೈಲಾಶ್ ಶರ್ಮಾ ಮತ್ತು ಅವರ ಪತ್ನಿ ಸಂತೋಷಿ, ಸತೀಶ ಶರ್ಮಾ ಮತ್ತು ಅವರ ಪತ್ನಿ ಪೂನಂ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಮಕ್ಕಳಾದ ಮನನ್ ಮತ್ತು ದೀಪಾಲಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.