ನವದೆಹಲಿ: ಜನನಾಯಕ್ ಜನತಾ ಪಕ್ಷ ಮೈತ್ರಿ ಸರ್ಕಾರ, ನೂತನ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರು ಬಿಜೆಪಿ ಮುಖಂಡ, ಡೆಪ್ಯುಟಿ ಸ್ಪೀಕರ್ ರಣಬೀರ್ ಗಂಗ್ವಾ ಅವರ ವಾಹನದ ಮೇಲೆ ದಾಳಿ ನಡೆಸಿ ಜಖಂಗೊಳಿಸಿರುವ ಆರೋಪದಡಿ ಹರ್ಯಾಣ ಪೊಲೀಸರು ನೂರಕ್ಕೂ ಅಧಿಕ ರೈತರ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಿರುವುದಾಗಿ ವರದಿ ಯಾಗಿದೆ.
ಈ ಘಟನೆ ಹರ್ಯಾಣದ ಸಿರ್ಸಾ ಜಿಲ್ಲೆಯಲ್ಲಿ ಜು.11ರಂದು ನಡೆದಿದ್ದು, ಪೊಲೀಸರು ಅದೇ ದಿನ ಎಫ್ ಐಆರ್ ದಾಖಲಿಸಿದ್ದರು. ದೇಶದ್ರೋಹ ಆರೋಪದ ಹೊರತಾಗಿಯೂ ರೈತರ ವಿರುದ್ಧ ಕೊಲೆ ಯತ್ನದ ಆರೋಪವನ್ನು ದಾಖಲಿಸಲಾಗಿದೆ. ಎಫ್ ಐಆರ್ ನಲ್ಲಿ ರೈತ ಚಳವಳಿಯ ಮುಖಂಡರಾದ ಹರ್ ಚರಣ್ ಸಿಂಗ್ ಮತ್ತು ಪ್ರಹ್ಲಾದ್ ಸಿಂಗ್ ಸೇರಿದಂತೆ ಇಬ್ಬರ ಹೆಸರನ್ನು ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆ ಬಿಡುಗಡೆಗೊಳಿಸಿದ್ದು, ಈ ಆರೋಪವನ್ನು ಅಲ್ಲಗಳೆದಿದೆ.