Thursday, 12th December 2024

ಮಿಜೋರಾಂನಲ್ಲಿ ಆಫ್ರಿಕನ್ ಹಂದಿ ಜ್ವರ ಪ್ರಕರಣ ಪತ್ತೆ

ಐಜ್ವಾಲ್‌: ಮೂರು ತಿಂಗಳ ಬಳಿಕ ಮಿಜೋರಾಂನಲ್ಲಿ ಆಫ್ರಿಕನ್ ಹಂದಿ ಜ್ವರ ಪ್ರಕರಣ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹಂದಿ ಜ್ವರ ದಿಂದಾಗಿ ಕಳೆದ ವರ್ಷ 33 ಸಾವಿರ ಹಂದಿಗಳು ರಾಜ್ಯದಲ್ಲಿ ಮೃತಪಟ್ಟಿದ್ದವು.

ಪೂರ್ವ ಮಿಜೋರಾಂನ ಚಂಫೈ ಪಟ್ಟಣದಲ್ಲಿ ಇತ್ತೀಚೆಗಷ್ಟೇ ಕೆಲವು ಹಂದಿ ಗಳು ಎಎಸ್‌ಎಫ್‌ನಿಂದಾಗಿ ಮೃತಪಟ್ಟಿದ್ದವು. ಚಂಫೈ ನೆರೆಯ ಎಲೆಕ್ಟ್ರಿಕ್ ವೆಂಗ್‌ನಲ್ಲಿ ಹಂದಿಗಳು ಮೃತಪಟ್ಟಿದ್ದರಿಂದ ಮಾ.21 ರಿಂದ ಮುಂದಿನ ಆದೇಶ ದವರೆಗೆ ಕಂಟೈನ್‌ಮೆಂಟ್ ಪ್ರದೇಶವೆಂದು ಘೋಷಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಮಿಜೋರಾಂ-ಮಣಿಪುರ ಗಡಿಯ ಸಕವರ್ದೈ ಗ್ರಾಮದಲ್ಲಿಯೂ ಎಎಸ್‌ಎಫ್‌ನಿಂದ ಹಂದಿ ಮೃತಪಟ್ಟಿದೆ.