ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯಕ್ಕೆ ಬೆಂಕಿ ಬಿದ್ದರೆ, ಅದು ಅಸ್ಸಾಂ, ಬಿಹಾರ, ಜಾರ್ಖಂಡ್, ಒಡಿಸ್ಸಾ ಮತ್ತು ದೆಹಲಿಯನ್ನು ವ್ಯಾಪಿಸಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆಗೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸುಪ್ರೀಂ ಕೋರ್ಟಿನ ವಕೀಲರೊಬ್ಬರು ಈ ಹೇಳಿಕೆಗೆ ವಿರೋಧಿಸಿ, ಪ್ರಕರಣ ದಾಖಲಿಸಿದ್ದಾರೆ. ತೃಣಮೂಲ ಛತ್ರ ಪರಿಷದ್ ವೇಳೆ ಮುಖ್ಯಮಂತ್ರಿ ಬ್ಯಾನರ್ಜಿ ಅವರು ಹೇಳಿಕೆ ನೀಡಿದ್ದು, ಭಾರೀ ವೈರಲ್ ಆಗಿತ್ತು.
ಮುಖ್ಯಮಂತ್ರಿ ಮಮತಾ ಅವರ ಹೇಳಿಕೆಯು ದೇಶದ ಸಮಗ್ರತೆ ಹಾಗೂ ಸಾಮಾಜಿಕ ಶಾಂತಿಗೆ ಧಕ್ಕೆ ನೀಡುವಂತಿದೆ. ಮುಖ್ಯಮಂತ್ರಿ ಅವರ ಹೇಳಿಕೆಯಲ್ಲಿ ದೆಹಲಿ ನಗರವೂ ಒಳಗೊಂಡಿದೆ. ತಾನೂ ಕೂಡ ದೆಹಲಿ ನಿವಾಸಿಯಾಗಿದ್ದು, ಮುಖ್ಯಮಂತ್ರಿ ಅವರ ಹೇಳಿಕೆ ಖಂಡಿಸುತ್ತ, ದೂರು ದಾಖಲಿಸಿದ್ದೇನೆ ಎಂದು ಇದೇ ವೇಳೆ ಹೇಳಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ದ ಸೆಕ್ಷನ್ 152, 192, 196, ಹಾಗೂ 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿಯ 12 ಗಂಟೆಗಳ ಬಂದ್ ಕರೆಯನ್ನು ಮಮತಾ ಬ್ಯಾನರ್ಜಿ ಅವರು, ಇದು ಬಂಗಾಳವನ್ನೇ ಸುಡುವ ಹುನ್ನಾರವಾಗಿದೆ ಎಂದು ಪ್ರತಿಕ್ರಿಯಿಸಿದ್ದರು. ಈ ವಿಚಾರದಲ್ಲಿ ಪ್ರಧಾನಿ ಮೋದಿಯವರು ರಾಜ್ಯದಲ್ಲಿ ಅಶಾಂತಿಗೆ ದಾರಿ ಮಾಡಿಕೊಟ್ಟಿದ್ದಾರೆ ಎಂದು ಟೀಕಿಸಿದ್ದರು.
ಬಂಗಾಳದಲ್ಲಿನ ಗಲಭೆ, ಬಾಂಗ್ಲಾದೇಶದ ಗಲಭೆಯಂತಿದೆ. ಆದರೂ, ನಾನು ನೆರೆದೇಶವನ್ನು ಇಷ್ಟಪಡುತ್ತೇನೆ. ಅಲ್ಲಿನವರು ನಮ್ಮಂತೆ ಬಂಗಾಳಿ ಭಾಷೆ ಮಾತನಾಡುತ್ತಾರೆ. ಆದರೆ, ಅದು ಬೇರೆ ದೇಶ ಎಂದು ಹೇಳಿದ್ದರು.
ಮಮತಾ ಅವರ ಹೇಳಿಕೆಯಲ್ಲಿ ಅಸ್ಸಾಂ ರಾಜ್ಯದ ಉಲ್ಲೇಖವಾಗಿದ್ದು, ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶಮಾ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.