Thursday, 12th December 2024

ಭಯಮುಕ್ತ ದೇಶ ನಿರ್ಮಾಣಕ್ಕಾಗಿ ಹೊರಗೆ ಬಂದು ಮತದಾನ ಮಾಡಿ: ರಾಹುಲ್ ಟ್ವೀಟ್

ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮೊದಲ ಹಂತದ ಮತದಾನದ ಹಿನ್ನೆಲೆ “ಭಯಮುಕ್ತ ದೇಶ ನಿರ್ಮಾಣಕ್ಕಾಗಿ ಹೊರಗೆ ಬಂದು ಮತದಾನ ಮಾಡಿ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಮೊದಲ ಹಂತದಲ್ಲಿ 11 ಜಿಲ್ಲೆಗಳ 58 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಶಾಮ್ಲಿ, ಮೀರತ್, ಹಾಪುರ್, ಮುಜಾಫರ್ ನಗರ್, ಭಾಗ್ಪತ್, ಗಜಿಯಾಬಾದ್, ಬುಲಂದ್ ಶಹರ್, ಅಲಿಘರ್, ಆಗ್ರಾ, ಗೌತಮ್ ಬುದ್ಧ ನಗರ್ ಹಾಗೂ ಮಥುರಾ ಜಿಲ್ಲೆಗಳಲ್ಲಿ ಮತದಾನ ಶುರುವಾಗಿದೆ.

ಉತ್ತರ ಪ್ರದೇಶದಲ್ಲಿ ಗುರುವಾರ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಚುನಾವಣಾ ಭದ್ರತೆಗಾಗಿ 412 ಸೆಂಟ್ರಲ್ ಪ್ಯಾರಾಮಿಲಿಟರ್ ಫೋರ್ಸ್ ಕಂಪನಿಗಳ 50,000 ಸಿಬ್ಬಂದಿಯನ್ನು ವಿವಿಧ ಕ್ಷೇತ್ರಗಳಲ್ಲಿ ನಿಯೋಜನೆ ಮಾಡಲಾಗಿದೆ.

ಇಂದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವಾಗಿದೆ. ಎಲ್ಲಾ ಮತದಾ ರರು ಕೋವಿಡ್-19 ನಿಯಮಗಳನ್ನು ಅನು ಸರಿಸುವ ಮೂಲಕ ಪ್ರಜಾಪ್ರಭುತ್ವದ ಈ ಪವಿತ್ರ ಹಬ್ಬದಲ್ಲಿ ಉತ್ಸಾಹದಿಂದ ಭಾಗವಹಿಸಬೇಕೆಂದು ನಾನು ವಿನಂತಿಸುತ್ತೇನೆ. ನೆನಪಿಡಿ – ಮೊದಲು ಮತದಾನ ಮಾಡಿ, ನಂತರ ಉಪಹಾರ ಮಾಡಿ, ಎಂದು ಹಿಂದಿಯಲ್ಲಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿಯ ಜೊತೆಗೆ ನಿಮಗೆ ಭದ್ರತೆ, ಗೌರವ ಮತ್ತು ಉತ್ತಮ ಆಡಳಿತ ನೀಡುವ ಸರ್ಕಾರವನ್ನು ಆಯ್ಕೆ ಮಾಡಲು ಈ ಹಂತದ ಎಲ್ಲಾ ಸಹೋದರ ಸಹೋದರಿಯರು ಗರಿಷ್ಠ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ನಿಮ್ಮ ಒಂದು ಮತ ಉತ್ತರ ಪ್ರದೇಶದ ಉಜ್ವಲ ಭವಿಷ್ಯದ ಆಧಾರವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.