Thursday, 19th September 2024

ಭಾಲಾಸ್ವಾ ಡೈರಿ: ಕಸದ ರಾಶಿಗೆ ಬಿದ್ದಿರುವ ಬೆಂಕಿ ಹತೋಟಿಗೆ ಬಂದಿಲ್ಲ !

ನವದೆಹಲಿ: ನವದೆಹಲಿಯ ಭಾಲಾಸ್ವಾ ಡೈರಿ ಸಮೀಪ ಕಸದ ರಾಶಿಗೆ ಬಿದ್ದಿರುವ ಬೆಂಕಿ ಹತೋಟಿಗೆ ಸಿಕ್ಕಿಲ್ಲ. ಶುಕ್ರವಾರವೂ ಹೊಗೆ ಬರುತ್ತಲೇ ಇದೆ.

ಅಗ್ನಿಶಾಮಕ ದಳದ ವಾಹನಗಳು ಗುರುವಾರವೂ ಬೆಂಕಿ ನಂದಿಸುವ ಕಾರ್ಯಾ ಚರಣೆ ಕೈಗೊಂಡಿದ್ದವು. ಶುಕ್ರವಾರ ಆವರಿಸಿರುವ ಹೊಗೆ ಮತ್ತಷ್ಟು ಆತಂಕ ಮೂಡಿಸಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಕಸದ ರಾಶಿಯಿಂದ ಹೊಗೆ ಹಬ್ಬುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡುತ್ತಿದೆ. ದೆಹಲಿ ಸರ್ಕಾರ ಉತ್ತರ ಮಹಾನಗರ ಪಾಲಿಕೆಗೆ 50 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ದೆಹಲಿಯ ಮಾಲಿನ್ಯ ನಿಯಂತ್ರಣ ಮಂಡಳಿ ಸರ್ಕಾರಕ್ಕೆ ಭಾಲಾಸ್ವಾ ಡೈರಿ ಪ್ರದೇಶದ ಬಗ್ಗೆ ವರದಿ ನೀಡಿದೆ. 6 ಗಂಟೆ ವೇಳೆಗೆ ಅಗ್ನಿ ಶಾಮಕ ದಳ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿತು. ದಟ್ಟ ಹೊಗೆ ಕಾರಣ ಸಮೀಪದಲ್ಲಿದ್ದ ಶಾಲೆ ಮುಚ್ಚಲಾಯಿತು.

ಸುತ್ತಮುತ್ತಲಿನ ಪ್ರದೇಶದ ಜನರು ಉಸಿರಾಡಲು ಸಹ ಕಷ್ಟಪಟ್ಟರು. ಆದರೆ ಶುಕ್ರವಾರವೂ ಬೆಂಕಿ ಹತೋಟಿಗೆ ಸಿಗುತ್ತಿಲ್ಲ.