ರೈಲು ಸಂಖ್ಯೆ 12246 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಹೌರಾ ದುರೊಂತೋ ಎಕ್ಸ್ ಪ್ರೆಸ್ ನಲ್ಲಿ ಚಿತ್ತೂರು ಜಿಲ್ಲೆ ಕುಪ್ಪಂ ನಿಲ್ದಾಣವನ್ನು ಸಮೀಪಿಸುತ್ತಿರುವಾಗ ಒಂದು ಬೋಗಿ ಯಲ್ಲಿ ಹೊಗೆ ಬರುತ್ತಿರುವುದನ್ನು ರೈಲು ನಿರ್ವಾಹಕರು ಗಮನಿಸಿರುವು ದಾಗಿ ತಿಳಿಸಿದೆ.
ರೈಲು ಸಿಬ್ಬಂದಿಯಿಂದ ತಕ್ಷಣವೇ ರೈಲನ್ನು ನಿಲ್ಲಿಸಿ ಪರಿಶೀಲಿಸಲಾಗಿದೆ. ಬೋಗಿಯಲ್ಲಿ ಬ್ರೇಕ್ ಬ್ಲಾಕ್ ನ ಘರ್ಷಣೆಯಿಂದಾಗಿ ಬ್ರೇಕ್ ಬೈಂಡಿಂಗ್ ಮತ್ತು ಹೊಗೆ ಬಂದಿರುವುದು ಕಂಡು ಬಂದಿದೆ. ರೈಲು ಸಿಬ್ಬಂದಿ ಅದನ್ನು ಸರಿಪಡಿಸಿದ್ದಾರೆ.
ಈ ಬಳಿಕ ಬೆಂಗಳೂರು – ಹೌರ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಪುನರಾರಂಭಿಸಿದೆ. ಯಾವುದೇ ಪ್ರಯಾಣಿಕರಿಗೆ ಗಾಯ, ಹಾನಿ ಸಂಭವಿಸಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.