ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರವಾಗಿ ಡಿಸೆಂಬರ್ ಅಂತ್ಯದವರೆಗೆ ನಿತ್ಯ 3,128 ಕ್ಯೂಸೆಕ್ ಹಾಗೂ ಮುಂದಿನ ವರ್ಷ ಜನವರಿ ತಿಂಗಳ ಕೊನೆಯವರೆಗೆ 1030 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWR) ಸರ್ಕಾರಕ್ಕೆ ಸೂಚಿಸಿದೆ.
ಡಿಸೆಂಬರ ಉಳಿದ ಅವಧಿಗೆ ದಿನಕ್ಕೆ 3,128 ಕ್ಯೂಸೆಕ್ ಮತ್ತು 2024ರ ಜನವರಿ ಅಂತ್ಯಕ್ಕೆ ದಿನಕ್ಕೆ 1,030 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಬೇಕಿದೆ. ಒಟ್ಟಾರೆ ಕರ್ನಾಟಕವು ಡಿ.20 ರಿಂದ 31ರ ವರೆಗೆ 3.51 ಟಿಎಂಸಿ ಮತ್ತು ಜನವರಿ1 ರಿಂದ 31ರವರೆಗೆ 2.76 ಟಿಎಂಸಿ ನೀರು ಹರಿಸಬೇಕಾಗಿದೆ.
ಸಭೆಯಲ್ಲಿ, ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ಎಂದು ಕರ್ನಾಟಕ ವಾದಿಸಿತ್ತು. ಅಲ್ಲದೇ ರಾಜ್ಯದ ನಾಲ್ಕು ಕಾವೇರಿ ಜಲಾನಯನ ಜಲಾಶ ಯಗಳು ಒಳಹರಿವಿನಲ್ಲಿ 52.82% ಕೊರತೆಯನ್ನು ಎದುರಿಸುತ್ತಿವೆ ಎಂದೂ ತಿಳಿಸಿತು. ತಮಿಳುನಾಡಿನಲ್ಲಿ ಈ ಸಮಯದಲ್ಲಿ ಮಳೆ ನಿರೀಕ್ಷಿಸಬಹು ದಾಗಿದೆ.
ಸಭೆಯಲ್ಲಿ 7.6 ಟಿಎಂಸಿ ಬಾಕಿ ನೀರು ಸೇರಿದಂತೆ ಕರ್ನಾಟಕ ಒಟ್ಟು 14 ಟಿಎಂಸಿ ನೀರು ಬಿಡಬೇಕು ಎಂದು ತಮಿಳುನಾಡು ಆಗ್ರಹಿಸಿತ್ತು.