Friday, 13th December 2024

CBFC ವಿರುದ್ಧ ಭ್ರಷ್ಟಾಚಾರದ ಆರೋಪ: ತನಿಖೆಗೆ ಆದೇಶ

ವದೆಹಲಿ: ತಮಿಳು ನಟ ವಿಶಾಲ್ ತಮ್ಮ ಸಂಕಷ್ಟ ಹಂಚಿಕೊಂಡಿದ್ದು, ಕೇಂದ್ರೀಯ ಚಲನಚಿತ್ರ ಪ್ರಮಾಣೀ ಕರಣ ಮಂಡಳಿಯು ಭ್ರಷ್ಟಾಚಾರದ ಕುರಿತು ಆರೋಪಿಸಿದ ನಂತರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತನಿಖೆಗೆ ಆದೇಶಿಸಿದೆ.

ವಿಶಾಲ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಬಿಡುಗಡೆ ಮಾಡಿ CBFC ವಿರುದ್ಧ ಆಘಾತಕಾರಿ ಆರೋಪಗಳನ್ನು ಮಾಡಿದರು.

I&B ಸಚಿವಾಲಯವು ಇದನ್ನು ‘ಅತ್ಯಂತ ದುರದೃಷ್ಟಕರ’. ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಂತೆ ನಿರ್ಮಾ ಪಕರ ಗಿಲ್ಡ್ ಆಫ್ ಇಂಡಿಯಾ ಮತ್ತು ಮೋಷನ್ ಪಿಕ್ಚರ್ ಅಸೋಸಿಯೇಷನ್‌ಗೆ ನಿರ್ದೇಶಿಸಿದೆ. “ನಟ @VishalKOfficial ಅವರು CBFC ಯಲ್ಲಿನ ಭ್ರಷ್ಟಾಚಾರದ ವಿಷಯವು ಅತ್ಯಂತ ದುರದೃಷ್ಟಕರವಾಗಿದೆ. ಸರ್ಕಾರವು ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಮತ್ತು ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗು ವುದು.”ಎಂದಿದೆ.

“ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರನ್ನು ವಿಚಾರಣೆ ನಡೆಸಲು ಮುಂಬೈಗೆ ನಿಯೋಜಿಸಲಾಗಿದೆ. jsfilms.inb@nic ನಲ್ಲಿ CBFC ಯಿಂದ ಯಾವುದೇ ಕಿರುಕುಳದ ಬಗ್ಗೆ ಮಾಹಿತಿ ಒದಗಿಸುವ ಮೂಲಕ ಸಚಿವಾಲಯದೊಂದಿಗೆ ಸಹಕರಿಸಲು ನಾವು ಎಲ್ಲರಿಗೂ ವಿನಂತಿಸುತ್ತೇವೆ. ಇನ್,” ಎಂದು ಟ್ವೀಟ್ ಮಾಡಿದೆ.

ಮಾರ್ಕ್ ಆಂಟೋನಿ ಹಿಂದಿ ರಿಲೀಸ್‌ಗಾಗಿ ಒಟ್ಟು 6.5 ಲಕ್ಷ ರೂಪಾಯಿ ನೀಡಬೇಕೆಂದು ವಿಶಾಲ್ ಅವರು ಬಿಡುಗಡೆ ಮಾಡಿದ ವೀಡಿಯೊದಲ್ಲಿ ಆರೋಪಿಸಿದ್ದಾರೆ.