Friday, 18th October 2024

Karti Chidambaram : ಚೀನಾ ವೀಸಾ ಅಕ್ರಮ ಪ್ರಕರಣ; ಕಾರ್ತಿ ಚಿದಂಬರಂ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಸಿಬಿಐ

Karti Chidambaram

ನವದೆಹಲಿ: ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ (Karti Chidambaram) ಮತ್ತು ಇತರರ ವಿರುದ್ಧ ಸಿಬಿಐ 2011ರಲ್ಲಿ ಅವರ ತಂದೆ ಪಿ.ಚಿದಂಬರಂ ಕೇಂದ್ರ ಗೃಹ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ಚೀನಾ ವೀಸಾ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ವಿದ್ಯುತ್ ಕಂಪನಿಗೆ ಚೀನೀ ಪ್ರಜೆಗಳನ್ನು ಕರೆತರಲು ವೀಸಾ ಪ್ರಕ್ರಿಯೆ ನಡೆಸಲು ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಸಿಬಿಐ ಶಿವಗಂಗಾದ ಲೋಕಸಭಾ ಸಂಸದ ಕಾರ್ತಿ ಚಿದಂಬರಂ, ಅವರ ನಿಕಟವರ್ತಿ ಎಸ್.ಭಾಸ್ಕರರಾಮನ್, ವೇದಾಂತದ ಅಂಗಸಂಸ್ಥೆ ತಲವಾಂಡಿ ಸಾಬೊ ಪವರ್ ಲಿಮಿಟೆಡ್ (ಟಿಎಸ್‌ಪಿಎಲ್) ಮತ್ತು ಮುಂಬೈ ಮೂಲದ ಬೆಲ್ ಟೂಲ್ಸ್ ವಿರುದ್ಧ ಆರೋಪ ಹೊರಿಸಲಾಗಿದೆ.

ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಫೋರ್ಜರಿ ಆರೋಪಗಳನ್ನು ಏಜೆನ್ಸಿ ಹೊರಿಸಿದೆ ಎಂದು ಅವರು ಹೇಳಿದರು. ವಿರಳ್ ಮೆಹ್ತಾ, ಅನೂಪ್ ಅಗರ್ವಾಲ್, ಮನ್ಸೂರ್ ಸಿದ್ದಿಕಿ ಮತ್ತು ಚೇತನ್ ಶ್ರೀವಾಸ್ತವ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ.

ಪಂಜಾಬ್ ಮೂಲದ ಟಿಎಸ್‌ಪಿಎಲ್ 1980 ಮೆಗಾವ್ಯಾಟ್ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುತ್ತಿದೆ ಮತ್ತು ಕೆಲಸವನ್ನು ಚೀನಾದ ಕಂಪನಿ ಶಾಂಡೊಂಗ್ ಎಲೆಕ್ಟ್ರಿಕ್ ಪವರ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ (ಸೆಪ್ಕೊ) ಗೆ ಹೊರಗುತ್ತಿಗೆ ನೀಡಲಾಗಿತ್ತು ಎಂದು 2022 ರಲ್ಲಿ ಎಫ್ಐಆರ್ ದಾಖಲಾಗಿತ್ತು. ಸಿಬಿಐ ಎರಡು ವರ್ಷ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದೆ.

ಇದನ್ನೂ ಓದಿ: Unique Tradition: ಈ ದೇಶಕ್ಕೆ ಬರುವ ಪ್ರವಾಸಿಗರಿಗೆ ವೀಸಾ ಜತೆ ಹೆಂಡತಿಯೂ ಸಿಕ್ತಾಳೆ; ಏನಿದು ಸಂಪ್ರದಾಯ ?

ಯೋಜನೆಯ ವಿಳಂಬಕ್ಕಾಗಿ ದಂಡನೆಯಿಂದ ತಪ್ಪಿಸಲು ಮಾನ್ಸಾದ ಖಾಸಗಿ ಕಂಪನಿ (ಟಿಎಸ್‌ಪಿಎಲ್) ಮಾನ್ಸಾ (ಪಂಜಾಬ್) ಜಿಲ್ಲೆಯಲ್ಲಿ ತಮ್ಮ ಸೈಟ್ಗೆ ಹೆಚ್ಚು ಹೆಚ್ಚು ಚೀನೀ ಪ್ರಜೆಗಳನ್ನು ಮತ್ತು ವೃತ್ತಿಪರರನ್ನು ಕರೆತರಲು ಪ್ರಯತ್ನಿಸುತ್ತಿತ್ತು. ಗೃಹ ಸಚಿವಾಲಯ ವಿಧಿಸಿದ ಮಿತಿಗಿಂತ ಹೆಚ್ಚಿನ ಯೋಜನಾ ವೀಸಾಗಳನ್ನು ನೀಡಲಾಗಿತ್ತು.