Thursday, 12th December 2024

ಸಿಬಿಎಸ್‌ಇ: ಎಲ್‌ಒಸಿ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ

ವದೆಹಲಿ: ಸಿಬಿಎಸ್‌ಇ ಮಂಡಳಿಯು 10 ಮತ್ತು 12ನೇ ತರಗತಿಯ ಎಲ್‌ಒಸಿ ಸಲ್ಲಿಸುವ ಕೊನೆಯ ದಿನಾಂಕವನ್ನ ವಿಸ್ತರಿಸಿದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಎಲ್‌ಒಸಿ ಭರ್ತಿ ಮಾಡುವ ದಿನಾಂಕವನ್ನ ಈಗ ಸೆಪ್ಟೆಂಬರ್ 28, 2023 ರವರೆಗೆ ವಿಸ್ತರಿಸಲಾಗಿದೆ.

ವಿಳಂಬ ಶುಲ್ಕ ಹೊಂದಿರುವ ಶಾಲೆಗಳಿಗೆ ಅಕ್ಟೋಬರ್ 29, 2023 ರಿಂದ ಅಕ್ಟೋಬರ್ 05, 2023 ರವರೆಗೆ ಈ ಪಟ್ಟಿಯನ್ನ ಭರ್ತಿ ಮಾಡಲು ಮತ್ತು ಸಲ್ಲಿಸಲು ಅವಕಾಶ ನೀಡಲಾಗುವುದು. ಸಿಬಿಎಸ್‌ಇಯ ಅಧಿಕೃತ ವೆಬ್ಸೈಟ್ https://www.cbse.gov.in/ ಭೇಟಿ ನೀಡುವ ಮೂಲಕ ಪರಿಶೀಲಿಸಬಹುದು.

ತನ್ನ ಅಭ್ಯರ್ಥಿಗಳ ಪಟ್ಟಿಯ ಕೊನೆಯ ದಿನಾಂಕವನ್ನ ವಿಸ್ತರಿಸುವುದನ್ನ ಹೊರತುಪಡಿಸಿ, ಇತರ ಎಲ್ಲಾ ಮಾರ್ಗಸೂಚಿಗಳು ಹಿಂದಿನ ಅಧಿಕೃತ ಅಧಿಸೂಚನೆಯ ಪ್ರಕಾರ ಉಳಿಯುತ್ತವೆ ಎಂದು ಸಿಬಿಎಸ್‌ಇ ಮಂಡಳಿ ಸ್ಪಷ್ಟಪಡಿಸಿದೆ. ಈ ಮೊದಲು, ಎಲ್‌ಒಸಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 18, 2023 ರವರೆಗೆ ಇತ್ತು. ಆದರೆ, ಈಗ ಅದನ್ನ ಮತ್ತಷ್ಟು ವಿಸ್ತರಿಸಲಾಗಿದೆ.