Friday, 22nd November 2024

ಚಿಕಿತ್ಸೆ ಫಲಿಸದೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಸಾವು

Bipin Rawat

ನವದೆಹಲಿ: ಭಾರತದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಪಯಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು, ಬಿಪಿನ್ ರಾವತ್ ಅವರು ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ.

ಬಿಪಿನ್ ರಾವತ್ ಪಯಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಕೊಯಮತ್ತೂರು, ಕೂನೂರು ನಡುವಿನ ನೀಲಗಿರಿ ಅರಣ್ಯ ವ್ಯಾಪ್ತಿಯಲ್ಲಿ ಹೆಲಿಕಾಪ್ಟರ್ ಪತನವಾಗಿದೆ.

ದುರಂತಕ್ಕೀಡಾದ ಹೆಲಿಕಾಪ್ಟರ್‌ನಲ್ಲಿ ಬಿಪಿನ್ ರಾವತ್ ಸೇರಿ 14 ಮಂದಿ ಪಯಣಿಸುತ್ತಿದ್ದರು. ದುರಂತದಲ್ಲಿ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿ 11 ಮಂದಿ ಬಲಿ ಆಗಿದ್ದಾರೆ. ಈ ಅವಘಡದ ನಂತರ ಗಾಯಾಳು ಗಳಿಗೆ ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಅಫಘಾತವಾಗ ಹೆಲಿಕಾಪ್ಟರ್‍ನಲ್ಲಿ ಎಲ್ಲರೂ ಮೃತರಾಗಿದ್ದಾರೆ.

2015ರಲ್ಲಿ ಸಂಭವಿಸಿದ ನಾಗಾಲ್ಯಾಂಡ್‍ನ ದೀಮಾಪುರ್ ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸ್ವಲ್ಪದ್ರಲ್ಲೇ ಪ್ರಾಣಾಪಾಯದಿಂದ ಬಿಪಿನ್ ರಾವತ್ ಪಾರಾಗಿದ್ದರು. ಆಗ ಬಿಪಿನ್ ರಾವತ್ ಲೆಫ್ಟಿನೆಂಟ್ ಜನರಲ್ ಆಗಿದ್ದರು. ಎಂಜಿನ್ ವೈಫಲ್ಯದಿಂದ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಪೈಲಟ್‍ಗಳು ಮತ್ತು ಕರ್ನಲ್ ಕೂಡ ಬದುಕುಳಿದಿದ್ದರು.

ಜನರಲ್ ಬಿಪಿನ್ ರಾವತ್ ಅವ್ರು ಶಿಮ್ಲಾದ ಸೇಂಟ್ ಎಡ್ವರ್ಡ್ಸ್ ಸ್ಕೂಲ್ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ. 1978ರ ಡಿಸೆಂಬರ್ 16ರಂದು ಪದಾತಿದಳದ ಹನ್ನೊಂದನೇ ಗೂರ್ಖಾ ರೈಫಲ್ಸ್ʼನ ಐದನೇ ಬೆಟಾಲಿಯನ್ ಆಗಿ ನಿಯೋಜಿಸಲಾಯಿತು.

ಡೆಹ್ರಾಡೂನ್ʼನ ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ ಪದವಿ ಪಡೆದಾಗ, ಅವರಿಗೆ ‘ಸ್ವೋರ್ಡ್ ಆಫ್ ಆನರ್’ ಪ್ರಶಸ್ತಿ ನೀಡಲಾಯ್ತು.

ರಾವತ್‌ ಅವರು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ (DRC) ಏಳನೇ ಅಧ್ಯಾಯದ ಮಿಷನ್ʼನಲ್ಲಿ ಬಹುರಾಷ್ಟ್ರೀಯ ಬ್ರಿಗೇಡ್ʼನ್ನ ನಿಯಂತ್ರಿಸಿದರು.‌ ಈಶಾನ್ಯದಲ್ಲಿ ಕಾರ್ಪ್ಸ್ ಕಮಾಂಡರ್ ಆಗಿದ್ದರು. ಮರುಭೂಮಿ ವಲಯದಲ್ಲಿ ಸೇನಾ ಕಮಾಂಡರ್ ಆಗಿ ಮತ್ತು ಪಶ್ಚಿಮ ರಂಗದಲ್ಲಿ ಕಾರ್ಯಾಚರಣೆಗಳನ್ನ ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ಹೊಂದಿದ್ದರು.

ಜನರಲ್ ರಾವತ್, ಹಲವಾರು ಪ್ರಮುಖ ಬೋಧನಾ ಮತ್ತು ಸಿಬ್ಬಂದಿ ನೇಮಕಾತಿಗಳನ್ನ ನಡೆಸಿದ್ದಾರೆ. ಇವುಗಳಲ್ಲಿ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ (ಡೆಹ್ರಾಡೂನ್) ಮತ್ತು ಹಿರಿಯ ಬೋಧಕರಾಗಿ ಜೂನಿಯರ್ ಕಮಾಂಡ್ ವಿಂಗ್ʼನಲ್ಲಿ ಬೋಧನಾ ಅವಧಿಗಳು ಸೇರಿವೆ. ಜನರಲ್ ಅವರು 31 ಡಿಸೆಂಬರ್ 2016ರಿಂದ 31 ಡಿಸೆಂಬರ್ 2019ರವರೆಗೆ ಸೇನಾ ಸಿಬ್ಬಂದಿಯ ಮುಖ್ಯಸ್ಥರಾಗಿದ್ದರು.

ಶೈಕ್ಷಣಿಕವಾಗಿ ಒಲವು ಹೊಂದಿದ್ದ ರಾವತ್, ರಾಷ್ಟ್ರೀಯ ಭದ್ರತೆ ಮತ್ತು ಮಿಲಿಟರಿ ನಾಯಕತ್ವದ ಬಗ್ಗೆ ಹಲವಾರು ಲೇಖನಗಳನ್ನ ರಚಿಸಿದ್ದಾರೆ. ಅವರು ಮ್ಯಾನೇಜ್ಮೆಂಟ್ ಮತ್ತು ಕಂಪ್ಯೂಟರ್ ಸ್ಟಡೀಸ್ʼನಲ್ಲಿ ಎರಡು ಡಿಪ್ಲೊಮಾಗಳನ್ನ ಹೊಂದಿದ್ದಾರೆ. ಮೀರತ್ʼನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯವು ‘ಮಿಲಿಟರಿ ಮೀಡಿಯಾ ಸ್ಟ್ರಾಟೆಜಿಕ್ ಸ್ಟಡೀಸ್’ ಕುರಿತ ಸಂಶೋಧನೆಗಾಗಿ ಜನರಲ್ ಅವರಿಗೆ ‘ತತ್ವಶಾಸ್ತ್ರದ ಡಾಕ್ಟರೇಟ್’ ನೀಡಿ ಗೌರವಿಸಲಾಯ್ತು.

ಜನರಲ್ ಬಿಪಿನ್ ರಾವತ್ ಅವರನ್ನು 31 ಡಿಸೆಂಬರ್ 2019 ರಂದು ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.