Monday, 25th November 2024

CDSCO: ಪ್ಯಾರಸಿಟಮಾಲ್‌ ಸೇರಿ 49 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ; ಇಲ್ಲಿದೆ ಸಂಪೂರ್ಣ ಪಟ್ಟಿ

CDSCO

ಬೆಂಗಳೂರು: ಡಯಾಬಿಟಿಸ್‌, ಆ್ಯಸಿಡಿಟಿ, ಜ್ವರಕ್ಕೆ ಸಾಮಾನ್ಯವಾಗಿ ಬಳಸಲಾಗುವ, ಪ್ಯಾರಸಿಟಮಾಲ್‌ (Paracetamol)ನಂತಹ 49 ಔಷಧಗಳು ಸೆಂಟ್ರಲ್‌ ಡ್ರಗ್ ರೆಗ್ಯುಲೇಟರಿ ಬಾಡಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್‌ನ (CDSCO) ಸೆಪ್ಟೆಂಬರ್‌ನ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ. ಸಿಡಿಎಸ್‌ಸಿಒ ಈ 49 ಔಷಧಗಳ ಪಟ್ಟಿಯನ್ನು ಬಿಡುಗಡೆಯಾಗಿದೆ. ವ್ಯಾಪಕವಾಗಿ ಬಳಸಲಾಗುವ ಕ್ಯಾಲ್ಸಿಯಂ ಪೂರಕ ಶೆಲ್ಕಲ್ 500 ಮತ್ತು ಪ್ಯಾನ್ ಡಿ ಸೇರಿದಂತೆ ನಾಲ್ಕು ಔಷಧಿಗಳ ಮಾದರಿಗಳು ನಕಲಿ ಎಂದು ಕೇಂದ್ರ ಔಷಧ ನಿಯಂತ್ರಣ ಪ್ರಾಧಿಕಾರ ಕಂಡುಕೊಂಡಿದೆ.

ಆಲ್ಕೆಮ್ ಹೆಲ್ತ್ ಸೈನ್ಸ್, ಅರಿಸ್ಟೊ ಫಾರ್ಮಾಸ್ಯುಟಿಕಲ್ಸ್, ಕ್ಯಾಮಿಲಾ ಫಾರ್ಮಾಸ್ಯುಟಿಕಲ್ಸ್, ಇನ್ನೋವಾ ಕ್ಯಾಪ್ಟನ್, ಹಿಂದೂಸ್ತಾನ್ ಆ್ಯಂಟಿಬಯಾಟಿಕ್ಸ್ ಮತ್ತು ಇಪ್ಕಾ ಲ್ಯಾಬೊರೇಟರೀಸ್‌ನಂತಹ ಕಂಪೆನಿಗಳು ಪ್ರಮಾಣಿತ ಗುಣಮಟ್ಟವನ್ನು ಹೊಂದಿಲ್ಲ ಎಂದೂ ಮಾಹಿತಿ ನೀಡಿದೆ.

ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ರಾಜೀವ್ ಸಿಂಗ್ ರಘುವಂಶಿ ಮಾಹಿತಿ ನೀಡಿ, “ಪರೀಕ್ಷಿಸಿದ ಸುಮಾರು 3,000 ಔಷಧಗಳ ಮಾದರಿಗಳಲ್ಲಿ 49 ಔಷಧಿಗಳು ಕಡಿಮೆ ಪರಿಣಾಮಕಾರಿ (NSQ) ಎಂದು ಕಂಡುಬಂದಿದ್ದರಿಂದ ಅವುಗಳನ್ನು ಹಿಂಪಡೆಯಲು ಸೂಚಿಸಲಾಗಿದೆ. ಒಟ್ಟು ಔಷಧಿಗಳಲ್ಲಿ ಕೇವಲ ಶೇ. 1.5ರಷ್ಟು ಮಾತ್ರ ಕಡಿಮೆ ಪರಿಣಾಮಕಾರಿ ಎಂಬುದು ಕಂಡುಬಂದಿದೆ” ಎಂದು ರಘುವಂಶಿ ತಿಳಿಸಿದ್ದಾರೆ.

ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಔಷಧಗಳು ಪಟ್ಟಿಯಲ್ಲಿವೆ?

Metronidazole Tablets I.P. 400 mg
Vomitel (Domperidon Suspension)
Oxytocin Injection I.P. 5 IU/1 ml
SPAMET GM 2 Tablets (Metformin Hydrochloride 500 mg SR & Glimepiride 2 mg Tablets IP)
Diclofenac Sodium Tablets IP 50 mg
Calcium Gluconate Injection I.P. 10 ml
Oxytocin Injection I.P. 1 ml
Ceftriaxone Injection I.P. 1g
Gentamycin Sulphate Injection I.P. 40 mg/ml
Stimin (Glycopyrrolate 0.5 mg / 5ml + Neostigmine methysulfate Injection 2.5 mg / 5ml)
Nozal Cream (Ketoconazole Cream BP)
Hepathin 5000 Injection 5 ml / vial (Heparin Sodium Injection IP 5000 IU / 5ml)
Gentagain (Gentamicin Injection I.P.)
Glipizide Tablets I.P. 5 mg
Omerin-D Capsules (Omeprazole & Domperidone Capsules IP)
Chill Acid MPS (Dried Aluminium Hydroxide, Magnesium Hydroxide & Activated Dimethicone Suspension)
Nimuvent-P Tablets (Nimesulide & Paracetamol Tablets)
Cipronir 500 (Ciprofloxacin Tablets IP 500 mg)
SMB OZ Tablets (Ofloxacin & Ornidazole Tablets IP)
Calcium 500 mg and Vitamin D3 250 IU Tablets IP
LOMJAN (Loperamide Hydrochloride Tablets I.P. 2 mg)
Glimepiride Tablets IP 1 mg
Fexofenadine Hydrochloride Tablets I.P.
Glimepiride Tablets I.P. 2 mg
PAN 40 (Pantoprazole Gastro-resistant Tablets IP)
Monocef-O 200 (Cefpodoxime Tablets IP 200 mg)
Clavam 625 (Amoxicillin And Potassium Clavulanate Tablets I.P.)
Fexofenadine Hydrochloride Tablets IP
CIPRODAC 500 (Ciprofloxacin Tablets IP 500 mg)
Ramipril Tablets I.P. 2.5 mg
Compound Sodium Lactate Injection I.P. (RL)
PHENERGAN (Promethazine Hydrochloride Injection I.P.)
Paracetamol Paediatric Oral Suspension IP
Spisam Gel (Aluminum Hydroxide, Simethicone & Magnesium Hydroxide Suspension)
P-Genta Injection (Gentamicin Sulphate Injection IP)
Flucse – 150 (Fluconazole Tablets IP 150 mg)
Bisalax Tablets (Bisacodyl Tablets I.P.)
Citrize-P (Cetirizine Dihydrochloride Syrup)
Celofos 1000 Injection (Ifosfamide for Injection IP with Mesna Injection)
ZERODOL-SP Tablets (Aceclofenac 100 mg, Serratiopeptidase 15 mg & Paracetamol 325 mg Tablets)
UTROCLEAR-OZ Solution (Ofloxacin and Ornidazole Intra Uterine Solution Vet.)
Nopion 150 Tablets (Bupropion Hydrochloride Extended Release Tablets USP)
COUGH-DM Cough Syrup (Dextromethorphan Hydrobromide, Chlorpheniramine Maleate and Phenylephrine Hydrochloride Syrup)
KEFZONE-S INJECTION (Cefoperazone and Sulbactam for Injection)
CASIDTAZ P Injection (Piperacillin and Tazobactam Injection IP)
NUROFENS-2500 Injection (Methylcobalamin Injection 2500 mcg)
Torverge-10 Tablets (Torsemide Tablets IP 10 mg)

ಆಗಸ್ಟ್‌ನಲ್ಲಿ ಜ್ವರ, ಗ್ಯಾಸ್ಟ್ರಿಕ್‌, ಮಧುಮೇಹ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಿಗೆ ತೆಗೆದುಕೊಳ್ಳುತ್ತಿದ್ದ ಸುಮಾರು 53 ಔಷಧಗಳು ಗುಣಮಟ್ಟ ತಪಾಸಣೆಯಲ್ಲಿ ವಿಫಲವಾಗಿದ್ದವು.

ಈ ಸುದ್ದಿಯನ್ನೂ ಓದಿ: 7,700 ಔಷಧ ಕಳಪೆ ಗುಣಮಟ್ಟ, 670 ಮಾದರಿ ಕಲಬೆರಕೆ