ಪಂಜಾಬ್ : ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರ ಮನೆಯಲ್ಲಿ ಸಂಭ್ರಮಾಚರಣೆ. ಪಂಜಾಬ್ ನಲ್ಲಿ ಅರವಿದ್ ಕೇಜ್ರಿವಾಲ್ ಅವರ ಪಕ್ಷವು ಮುನ್ನಡೆಯಲ್ಲಿದೆ ಎಂದು ವರದಿಯಾಗಿದೆ.
ಭಗವಂತ್ ಮಾನ್ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಧುರಿ ಕ್ಷೇತ್ರದಿಂದ ಮುನ್ನಡೆ ಸಾಧಿಸಿದ್ದಾರೆ. ಮಾನ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ದಲ್ವಿರ್ ಸಿಂಗ್ ಗೋಲ್ಡಿ ಅವರಿಗಿಂತ ಮುಂದಿದ್ದಾರೆ.
ಈ ಹಿಂದೆ ಎಎಪಿಯ ರಾಜ್ಯ ಘಟಕದ ಮುಖ್ಯಸ್ಥ ಭಗವಂತ್ ಮಾನ್ ರಾಜ್ಯದಲ್ಲಿ ಪಕ್ಷವು ಮುಂದಿನ ಸರ್ಕಾರವನ್ನು ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಗಿ ಭದ್ರತೆಯ ನಡುವೆ ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಗುರುವಾರ ಆರಂಭವಾಗಿದೆ. 66 ಸ್ಥಳಗಳಲ್ಲಿ 117 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.
ಎಎಪಿ 20 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರೆ, ಎಸ್‌ಎಡಿ-ಬಿಜೆಪಿ 18 ಸ್ಥಾನ ಗಳನ್ನು ಗೆದ್ದಿತ್ತು ಮತ್ತು ಎರಡು ಸ್ಥಾನಗಳು ಲೋಕ ಇನ್ಸಾಫ್ ಪಕ್ಷದ ಕಿಟ್ಟಿಗೆ ಸೇರಿದ್ದವು.