ನವದೆಹಲಿ: ಶೀಘ್ರವೇ ಸಿಮೆಂಟ್ ಬೆಲೆಯಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ. ಈ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಲಿದೆ.
ಉತ್ಪಾದನಾ ವೆಚ್ಚದಲ್ಲಿ ಭಾರೀ ಏರಿಕೆಯಾಗುತ್ತಿರುವ ಕಾರಣ, ದೇಶಿಯ ಸಿಮೆಂಟ್ ಕಂಪನಿಗಳು ಶೀಘ್ರವೇ ಸಿಮೆಂಟ್ ಬೆಲೆಯನ್ನು 25-50 ರೂ.ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ.
ಸಿಮೆಂಟ್ ದರದಲ್ಲಿ ಸಾಗಣೆ ವೆಚ್ಚವೇ ಶೇ. 50 ರಷ್ಟು ಇರುವ ಕಾರಣ ಡೀಸೆಲ್ ದರ ಏರಿಕೆ ಸಹಜವಾ ಗಿಯೇ ಪರಿಣಾಮ ಬೀರಲಿದೆ. ಹೀಗಾಗಿ ಕಂಪನಿಗಳು ಪ್ರತಿ ಚೀಲದ ಬೆಲೆಯಲ್ಲಿ 25-50 ರೂ. ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ. ಈಗಾಗಲೇ ಪ್ರತಿ ಚೀಲ ಸಿಮೆಂಟ್ ಬೆಲೆ 360 ರೂ. 420 ರೂ.ವರೆಗೆ ತಲುಪಿದೆ.