Thursday, 12th December 2024

ಮನೆ ಕಟ್ಟುವ ಮುನ್ನ ಯೋಚಿಸಿ…ಸಿಮೆಂಟ್ ದರವೂ ಹೆಚ್ಚಳ

ನವದೆಹಲಿ : ಮನೆ ಕಟ್ಟುವವರಿಗೆ ಬಿಗ್ ಶಾಕ್ ಎದುರಾಗಿದೆ. ಶೀಘ್ರವೇ ಸಿಮೆಂಟ್ ಬೆಲೆ 15 ರಿಂದ 20 ರೂ. ಹೆಚ್ಚಳವಾಗುವಸಾಧ್ಯತೆ ಇದೆ.

ಸಿಮೆಂಟ್ ತಯಾರಿಕೆಗೆ ಅಗತ್ಯದ ಕಚ್ಚಾವಸ್ತುಗಳ ಬೆಲೆಯಲ್ಲಿ ಏರಿಕೆಯಿಂದಾಗಿ ಸಿಮೆಂಟ್ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. 50 ಕೆಜಿ ಇರುವ ಪ್ರತಿ ಚೀಲದ ಸಿಮೆಂಟ್ ಬೆಲೆ 400 ರೂ. ಮುಟ್ಟಲಿದೆ ಎನ್ನ ಲಾಗಿದೆ.

ಕರೋನಾ ಕಾರಣಕ್ಕೆ 2020 ರಲ್ಲಿ ಸಿಮೆಂಟ್ ಬೇಡಿಕೆಯಲ್ಲಿ ಕುಸಿತವಾಗಿತ್ತು. ಆದರೆ ಆರ್ಥಿಕ ವರ್ಷದಲ್ಲಿ ಸಿಮೆಂಟ್ ಬೇಡಿಕೆ ಪ್ರಮಾಣ ಶೇ. 11-13 ರಷ್ಟು ಏರಿಕೆಯಾಗಲಿದೆ. ಹೀಗಾಗಿ ಸಿಮೆಂಟ್ ಬೆಲೆ ಕೆಲ ತಿಂಗಳಲ್ಲೇ 15 ರೂ. ನಿಂದ 20 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ.