Thursday, 12th December 2024

ಜನವರಿ 29-ಫೆ.15ರ ವರೆಗೆ ಕೇಂದ್ರ ಬಜೆಟ್‌ ಅಧಿವೇಶನ

ನವದೆಹಲಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ ಅಧಿವೇಶನದ ಮೊದಲ ಸುತ್ತು ಇದೇ ಜನವರಿ ತಿಂಗಳ 29 ರಿಂದ ಫೆ.15ರ ವರೆಗೆ ಅಧಿವೇಶನ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ತಿಳಿಸಿದೆ.

ಇದರ ಮುಂದುವರಿದ ಭಾಗ ಮಾರ್ಚ್‌ 8 ರಿಂದ ಏಪ್ರಿಲ್‌ 8 ರವರೆಗೆ ನಡೆಯಲಿದೆ.

ಈ ನಡುವೆ ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಲಿದ್ದಾರೆ.