Saturday, 23rd November 2024

ಸ್ಪೈಸ್‌ಜೆಟ್’ಗೆ 789 ಕೋಟಿ ರೂ. ನಿವ್ವಳ ನಷ್ಟ: ಸಿಎಫ್‌ಓ ರಾಜೀನಾಮೆ

ವದೆಹಲಿ: ಸ್ಪೈಸ್‌ಜೆಟ್ 789 ಕೋಟಿ ರೂ. ನಿವ್ವಳ ನಷ್ಟವನ್ನು ದಾಖಲಿಸಿದ ಬೆನ್ನಲ್ಲೇ ಏರ್‌ಲೈನ್‌ನ ಮುಖ್ಯ ಹಣಕಾಸು ಅಧಿಕಾರಿ ಸಂಜೀವ್ ತನೇಜಾ ರಾಜೀನಾಮೆ ನೀಡಿದ್ದಾರೆ.

ಸ್ಪೈಸ್‌ಜೆಟ್ ಏರ್‌ಲೈನ್ ಜೂನ್ 30, 2022ಕ್ಕೆ ಕೊನೆಗೊಳ್ಳುವ ಈ ತ್ರೈಮಾಸಿಕದಲ್ಲಿ 789 ಕೋಟಿ ರೂಪಾಯಿ ನಿವ್ವಳ ನಷ್ಟ ವನ್ನು ಅನುಭವಿಸಿರುವುದರ ಕುರಿತು ವರದಿ ಆಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 729 ಕೋಟಿ ರೂ. ನಷ್ಟಕ್ಕೆ ಹೋಲಿಸಿ ನೋಡಲಾಗಿದೆ.

ಈ ತ್ರೈಮಾಸಿಕದಲ್ಲಿ ಒಟ್ಟು ಆದಾಯವು 2,478 ಕೋಟಿ ರೂಪಾಯಿಗಳಾಗಿದ್ದು, ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 1,266 ಕೋಟಿ ರೂಪಾಯಿಗಳಾಗಿತ್ತು. ಇದೇ ವರ್ಷದ ತ್ರೈಮಾಸಿಕದಲ್ಲಿ ನಿರ್ವಹಣಾ ವೆಚ್ಚ 3,267 ಕೋಟಿ ರೂಪಾಯಿ ಗಳಾಗಿದ್ದು, ಕಳೆದ ವರ್ಷದ ತ್ರೈಮಾಸಿಕದಲ್ಲಿ ಅದು 1,995 ಕೋಟಿ ರೂಪಾಯಿ ಆಗಿತ್ತು.