Sunday, 15th December 2024

ಭೀಕರ ಹಿಮ ಸುನಾಮಿ: ಮೃತರ ಸಂಖ್ಯೆ 61ಕ್ಕೆ ಏರಿಕೆ

ಡೆಹ್ರಾಡೂನ್: ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಹಿಮ ಸುನಾಮಿಯಲ್ಲಿ ಪತ್ತೆಯಾದ ಶವಗಳ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.

ಈ ವರೆಗಿನ ಕಾರ್ಯಾಚರಣೆಯಲ್ಲಿ 61 ಶವಗಳು ಪತ್ತೆಯಾಗಿದೆ. ಈ ಪೈಕಿ ತಪೋವನ ಸುರಂಗ ಮಾರ್ಗದಲ್ಲೇ ಶವಗಳು ದೊರೆತಿದೆ. ತಪೋವನ ಮತ್ತು ರೈನಿಯಲ್ಲಿ ನಡೆದ ಹಿಮ ಸುನಾಮಿಯಲ್ಲಿ 200ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದರು.

34 ಶವಗಳ ಗುರುತು ಪತ್ತೆಯಾಗಿದ್ದು, ಒಂದು ಶವದ ದೇಹದ ಭಾಗದ ಡಿಎನ್ ಎ ಪರೀಕ್ಷೆಯಿಂದ ಶವದ ಗುರುತು ಪತ್ತೆ ಮಾಡ ಲಾಗಿದೆ. ಗುರುತು ಪತ್ತೆಗೆ 56 ಕುಟುಂಬಗಳ ಸದಸ್ಯರು ಮತ್ತು 49 ಶವಗಳ ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದೆ.

ನಂದಾದೇವಿ ಪರ್ವತದ ಮೇಲಿನ ಹಿಮ ಸ್ಫೋಟಗೊಂಡು ಅಲಕಾನಂದ ಮತ್ತು ದೌಳೀಗಂಗಾ ನದಿಯಲ್ಲಿ ವ್ಯಾಪಕ ಪ್ರವಾಹ ಉಂಟಾಗಿತ್ತು. ತಪೋವನ ಹೈಡ್ರೋ ವಿದ್ಯುತ್ ಯೋಜನೆ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.