Sunday, 15th December 2024

Chanakya Niti: ಮನದ ನಕಾರಾತ್ಮಕತೆ ದೂರ ಮಾಡಲು ಈ ಮೂವರಿಂದ ದೂರವಿರಿ!

Chanakya Niti

ನಂದ ರಾಜವಂಶವನ್ನು (Nanda dynasty) ಉರುಳಿಸಿ, ಮೌರ್ಯ ಸಾಮ್ರಾಜ್ಯ (Mauryan Empire) ಸ್ಥಾಪಿಸುವಲ್ಲಿ ಭಾರತದ ಮೊದಲ ಅರ್ಥಶಾಸ್ತ್ರಜ್ಞ ಮತ್ತು ತತ್ತ್ವಜ್ಞಾನಿ ಆಚಾರ್ಯ ಚಾಣಕ್ಯರ (Chanakya Niti) ಪಾತ್ರ ಬಹುಮುಖ್ಯವಾದದ್ದು. ಆರ್ಥಿಕ, ರಾಜಕೀಯ, ಸಾಮಾಜಿಕ ವಿಚಾರಗಳ ಬಗ್ಗೆ ಸಾಕಷ್ಟು ಜ್ಞಾನ ಹೊಂದಿದ್ದ ಅವರ ಸಾಕಷ್ಟು ವಿಚಾರಗಳು ಇಂದಿಗೂ ಪ್ರಸ್ತುತವೆನಿಸುತ್ತದೆ. ರಾಜಕೀಯದ ಜೊತೆಗೆ ಚಾಣಕ್ಯ ಸಮಾಜದ ವಿವಿಧ ಮುಖಗಳ ಕುರಿತು ಚೆನ್ನಾಗಿ ಬಲ್ಲವರಾಗಿದ್ದರು. ಹೀಗಾಗಿ ಅವರು ಈ ಮೂರು ಪ್ರಮುಖ ವ್ಯಕ್ತಿಗಳಿಂದ ಸದಾ ದೂರವಿರಬೇಕು ಎಂದು ಹೇಳುತ್ತಿದ್ದರು. ಕೆಲವು ವ್ಯಕ್ತಿಗಳು ಶತ್ರುಗಳು, ಹಾವು ಮತ್ತು ಚೇಳುಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ಅವರು ಹೇಳಿದ್ದಾರೆ. ಇಂಥವರನ್ನು ಗುರುತಿಸುವುದು ಅವರಿಂದ ದೂರವಿರಲು ಸಹಾಯ ಮಾಡುತ್ತದೆ ಎಂದೂ ಅವರು ಸಲಹೆ ನೀಡಿದ್ದರು.

Chanakya Niti

ಸ್ವಾರ್ಥಿಗಳು

ಅಸೂಯೆ ಪಡುವವರು ಮತ್ತು ಸ್ವಾರ್ಥ ಮನೋಭಾವದ ವ್ಯಕ್ತಿಗಳಿಂದ ನಾವು ಯಾವತ್ತೂ ದೂರವಿರುವುದು ಉತ್ತಮ ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ಇಂತಹ ಜನರಿಂದ ನಾವು ಯಾವತ್ತೂ ಸಹಾಯವನ್ನು ಕೇಳಬಾರದು. ಇಂಥವರಿಗೆ ಸರಿ ಯಾವುದು ಮತ್ತು ತಪ್ಪು ಯಾವುದು ಎಂಬುದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಇಂಥವರಿಗೆ ಇನ್ನೊಬ್ಬರ ಪ್ರಗತಿಯನ್ನು ಕಂಡರೆ ಸಹಿಸಲು ಸಾಧ್ಯವಾಗುವುದಿಲ್ಲ. ಇವರು ಸದಾ ಇತರರ ಬಗ್ಗೆ ಅಸೂಯೆ ಪಡುತ್ತಾರೆ. ಒಳಿತು, ಕೆಡುಕಗಳ ಬಗ್ಗೆ ಯೋಚಿಸದೆ ಮಾತನಾಡುತ್ತಾರೆ, ತಮ್ಮ ಕೆಲಸವನ್ನು ಮಾಡುತ್ತಾರೆ. ಹೀಗಾಗಿ ಇಂಥವರು ನಂಬಿಕೆಗೆ ಯೋಗ್ಯರಾಗಿರುವುದಿಲ್ಲ ಎನ್ನುತ್ತಾರೆ ಚಾಣಕ್ಯ.

ದುರಾಸೆ ಮತ್ತು ಅಹಂಕಾರಿಗಳು

ಇನ್ನೊಬ್ಬರನ್ನು ಕುರುಡಾಗಿ ನಂಬುವವರು, ದುರಾಸೆ ಉಳ್ಳವರು ಮತ್ತು ಅಂಹಕಾರಿಗಳಿಂದ ದೂರವಿರುವುದು ಒಳ್ಳೆಯದು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಇವರಿಂದ ಯಾವುದೇ ಪ್ರಯೋಜನವಿರುವುದಿಲ್ಲ. ಇವರು ಇನ್ನೊಬ್ಬರಿಗೆ ಹಾನಿಯುಂಟು ಮಾಡಬಹುದು. ಇಂತಹ ವ್ಯಕ್ತಿಗಳು ನಂಬಿಕೆಗೆ ಯೋಗ್ಯರಾಗಿರುವುದಿಲ್ಲ. ಇವರು ತಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರನ್ನು ಬಳಸಿಕೊಳ್ಳುತ್ತಾರೆ. ಯಾವಾಗ ಬೇಕಾದರೂ ವಿಶ್ವಾಸಕ್ಕೆ ದ್ರೋಹ ಮಾಡಬಲ್ಲರು. ಇವರು ಕೇವಲ ತಮ್ಮ ಹಿತಾಸಕ್ತಿಗಳನ್ನು ಮಾತ್ರ ಪರಿಗಣಿಸುತ್ತಾರೆ.

Vastu Tips: ಸಂಪತ್ತು, ಸಂತೋಷವನ್ನೂ ತರಬಲ್ಲದು ಗೋಡೆ ಗಡಿಯಾರ!

ಕೋಪಿಷ್ಟರು

ಕೆಲವರು ತಕ್ಷಣ ಕೋಪಗೊಳ್ಳುತ್ತಾರೆ. ಇದು ತುಂಬಾ ಅಪಾಯಕಾರಿ. ಈ ರೀತಿ ಕೋಪಗೊಳ್ಳುವವರು ಇತರರನ್ನು ಬಹುಬೇಗನೆ ನೋಯಿಸುತ್ತಾರೆ. ಯೋಚಿಸದೆ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವರಿಗೆ ತಾಳ್ಮೆ ಇರುವುದಿಲ್ಲ. ಸರಿ, ತಪ್ಪುಗಳ ಬಗ್ಗೆಯೂ ಇವರು ಯೋಚಿಸುವುದಿಲ್ಲ. ಇಂತವರು ಶತ್ರುಗಳಿಗಿಂತಲೂ ಹೆಚ್ಚು ಅಪಾಯಕಾರಿಯಾಗಿರುತ್ತಾರೆ. ಹೀಗಾಗಿ ಇಂತಹ ವ್ಯಕ್ತಿಗಳಿಂದ ದೂರವಿರುವುದು ಒಳ್ಳೆಯದು ಎನ್ನುತ್ತಾರೆ ಆಚಾರ್ಯ ಚಾಣಕ್ಯ.