Sunday, 15th December 2024

ಚಾರ್ ಧಾಮ್ ಯಾತ್ರೆ ನಾಳೆಯಿಂದ ಆರಂಭ

ಉತ್ತರಾಖಂಡ:‌ ಉತ್ತರಾಖಂಡ ಹೈಕೋರ್ಟ್ ಚಾರ್ ಧಾಮ್ ಯಾತ್ರೆ ಶನಿವಾರದಿಂದ ಅಧಿಕೃತವಾಗಿ ಪ್ರಾರಂಭ ವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕು ಪೂಜ್ಯ ಹಿಮಾಲಯದ ದೇವಾಲಯಗಳಿಗೆ ಪ್ರತಿದಿನ ಅನುಮತಿಸಲಾಗುವ ಯಾತ್ರಿಕರ ಸಂಖ್ಯೆಯನ್ನ ಮಿತಿಗೊಳಿಸುವುದರೊಂದಿಗೆ ಯಾತ್ರೆ ಸೆ.೧೮ರಿಂದ ಆರಂಭವಾಗಲಿದೆ.

ಚಾರ್ ಧಾಮ್ ದೇವಸ್ಥಾನ ನಿರ್ವಹಣಾ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿನಾಥ್ ರಾಮನ್ ಅವರು, ಶನಿವಾರ ಯಾತ್ರೆ ಪ್ರಾರಂಭವಾಗ ಲಿದ್ದು, ಅದಕ್ಕೆ ಸಂಬಂಧಿಸಿದ ಎಸ್ ಒಪಿಗಳನ್ನು ಸಂಜೆಯ ವೇಳೆಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

‘ಚಾರ್ ಧಾಮ್ʼಗೆ ಭೇಟಿ ನೀಡಲು ಬಯಸುವ ಯಾತ್ರಿಕರು ಚಾರ್ ಧಾಮ್ ದೇವಸ್ಥಾನ ನಿರ್ವಹಣಾ ಮಂಡಳಿ ವೆಬ್ ಸೈಟ್ʼನಲ್ಲಿ ತಮ್ಮನ್ನು ನೋಂದಾಯಿಸಿ ಕೊಳ್ಳಬೇಕಾಗುತ್ತದೆ. ತಮ್ಮೊಂದಿಗೆ ನಕಾರಾತ್ಮಕ ಕೋವಿಡ್-19 ವರದಿಯನ್ನು ತರಬೇಕಾಗುತ್ತದೆ ಅಥವಾ ಕೋವಿಡ್-19 ಲಸಿಕೆಯ ಎರಡೂ ಡೋಸ್ʼಗಳನ್ನು ಪಡೆದ ಪ್ರಮಾಣಪತ್ರವನ್ನು ತರಬೇಕಾಗುತ್ತದೆ.