ಚಂಡೀಗಢ: ಚರಂಜಿತ್ ಸಿಂಗ್ ಚನ್ನಿ ಸೋಮವಾರ ಪಂಜಾಬ್ ನ ಮೊದಲ ದಲಿತ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪಕ್ಷದಲ್ಲಿ ತೀವ್ರ ಅಧಿಕಾರ ಸಂಘರ್ಷದ ನಂತರ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ಒಂದು ದಿನದ ನಂತರ, ಚನ್ನಿಯನ್ನು ಅಂತಿಮವಾಗಿ ಪಂಜಾಬ್ ನ ಮುಂದಿನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಆಯ್ಕೆ ಮಾಡಿತು.
ನಿರ್ಗಮಿತ ಸಿಎಂ ಅಮರಿಂದರ್ ಸಿಂಗ್ ಸಂಪುಟದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿರುವ ಚನ್ನಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಯಿತು. 58 ವರ್ಷದ ಚನ್ನಿ ಪಂಜಾಬ್ ನಲ್ಲಿ ವಿಧಾನಸಭಾ ಚುನಾವಣೆಗೆ ಆರು ತಿಂಗಳಿಗಿಂತ ಕಡಿಮೆ ಇರುವಾಗ ಮುಖ್ಯಮಂತ್ರಿಯಾಗುತ್ತಾರೆ.
ಪಂಜಾಬ್ ಸಿಎಂ ಆಗಿ ನೇಮಕಗೊಂಡ ಚರಂಜಿತ್ ಸಿಂಗ್ ಚನ್ನಿ ಅವರು ಬೆಳಿಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮೊದಲು ರೂಪ್ ನಗರದ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು.