Saturday, 14th December 2024

ಚಾರ್ ಧಾಮ್ ಯಾತ್ರೆ ಇಂದಿನಿಂದ ಪ್ರಾರಂಭ

ರುದ್ರಪ್ರಯಾಗ: ಹಿಮಾಲಯದ ಪವಿತ್ರ ಹಾಗೂ ಪ್ರಮುಖ ದೇವಾಲಯಗಳು ಭಕ್ತರಿಗಾಗಿ ಬಾಗಿಲುಗಳು ತೆರೆಯುವು ದರಿಂದ ಚಾರ್ ಧಾಮ್ ಯಾತ್ರೆ ಶುಕ್ರವಾರದಿಂದ ಪ್ರಾರಂಭವಾಗಿದೆ.

ಬಹಳ ದಿನಗಳ ನಂತರ ಗಂಗೋತ್ರಿ, ಯಮುನೋತ್ರಿ ಮತ್ತು ಕೇದಾರನಾಥ ದೇವಾಲಯಗಳ ಬಾಗಿಲುಗಳು ಏಕಕಾಲದಲ್ಲಿ ಅಂದರೆ ಶುಕ್ರವಾರ ಬೆಳಗ್ಗೆ 6:55 ಕ್ಕೆ ತೆರೆಯಲ್ಪಟ್ಟವು. ಈ ಕ್ಷಣ ಕಣ್ತುಂಬಿಕೊಳ್ಳಲು ಸುಮಾರು 15 ಸಾವಿರ ಯಾತ್ರಿಕರು (ಭಕ್ತರು) ಗಂಗೋತ್ರಿ ಮತ್ತು ಕೇದಾರನಾಥ ಧಾಮ ತಲುಪಿದ್ದರು.

ಚಾರ್ ಧಾಮ್ ಯಾತ್ರೆಗೆಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. 35 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ವಿವಿಧೆಡೆ ರೈಲು, ಬಸ್​ ನಿಲ್ದಾಣಗಳಲ್ಲಿ ತಂಗಿದ್ದಾರೆ. ಮೇ 12 ರಿಂದ ಬದರಿನಾಥ ದೇವಸ್ಥಾನದಲ್ಲಿ ದರ್ಶನ ಆರಂಭವಾಗಲಿದೆ.

ಮೊದಲಿಗೆ ಕೇದಾರನಾಥ ಧಾಮದ ಬಾಗಿಲು ಬೆಳಗ್ಗೆ 6 ಗಂಟೆಗೆ ತೆರೆಯಿತು. ಬಾಬಾ ಕೇದಾರ್ ಪಂಚಮುಖಿ ಚಲ್ ವಿಗ್ರಹದ ಡೋಲಿ ಉತ್ಸವ ಕೂಡ ಶುಕ್ರವಾರ ಮಧ್ಯಾಹ್ನ 6 ಗ್ರೆನೇಡಿಯರ್ ಆರ್ಮಿ ರೆಜಿಮೆಂಟ್ ಬ್ಯಾಂಡ್‌ನ ಸುಮಧುರ ಶಬ್ದಗಳ ನಡುವೆ ಕೇದಾರಪುರಿ ತಲುಪಿತು.