Friday, 22nd November 2024

Cheating case: ತಿರುಪತಿಯಲ್ಲಿ ವಿಐಪಿ ದರ್ಶನದ ಭರವಸೆ ನೀಡಿ ವಂಚನೆ; ಜಗನ್‌ ರೆಡ್ಡಿ ಪಕ್ಷದ ನಾಯಕನ ವಿರುದ್ಧ ಕೇಸ್‌

tirupati temple

ಹೈದರಾಬಾದ್‌: ತಿರುಪತಿ ತಿರುಮಲ ದೇಗುಲ(Tirupati Temple)ದಲ್ಲಿ ವಿಐಪಿ ದರ್ಶನ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪ(Cheating case)ದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಎಂಎಲ್‌ಸಿ(YSR Congress Party MLC) ಮಾಯನ ಜಾಕಿಯಾ ಖಾನಮ್‌(Mayana Zakia Khanam) ಹಾಗೂ ಇತರ ಇಬ್ಬರು ವಿರುದ್ಧ ಆಂಧ್ರ ಪ್ರದೇಶ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ತಿರುಮಲ ತಿರುಪತಿ ದೇವಸ್ಥಾನಂ((TTD)ಯಿಂದ ದೂರು ದಾಖಲಾಗಿದೆ. ಖಾನಂ, ಆಕೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೃಷ್ಣ ತೇಜ ಮತ್ತು ಮತ್ತೊಬ್ಬ ವ್ಯಕ್ತಿ ಪಿ.ಚಂದ್ರಶೇಖರ್ ವಿಐಪಿ ದರ್ಶನ ಮತ್ತು ವೇದಾಶೀರ್ವಾದಂ, ಧಾರ್ಮಿಕ ವಿಧಿಗಳನ್ನು ನೀಡುವುದಾಗಿ ವ್ಯಕ್ತಿಯೊಬ್ಬನಿಗೆ 65,000 ರೂ.ಗಳನ್ನು ವಂಚಿಸಿದ್ದಾರೆ ಎನ್ನಲಾಗಿದೆ. ಅಕ್ಟೋಬರ್ 19, ಶನಿವಾರದಂದು ತಿರುಮಲ ದೇವಸ್ಥಾನದಲ್ಲಿ ವಿಐಪಿ ದರ್ಶನ ಮತ್ತು ವೇದಾಶೀರ್ವಾದನ ಟಿಕೆಟ್ ನೀಡುವ ನೆಪದಲ್ಲಿ ಎನ್ ಸಾಯಿಕುಮಾರ್ ಅವರು ಶ್ರೀವಾರಿ ದೇವಸ್ಥಾನದ ಬಳಿ ಆರೋಪಿಗಳಿಗೆ ಹಣವನ್ನು ಹಸ್ತಾಂತರಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಟಿಟಿಡಿಯ ವಿಜಿಲೆನ್ಸ್ ಅಧಿಕಾರಿ ದೂರಿದ್ದಾರೆ.

ದೂರನ್ನು ಸ್ವೀಕರಿಸಿದ ನಂತರ, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ತನಿಖೆಯನ್ನು ಪ್ರಾರಂಭಿಸಲಾಯಿತು. ಈ ಹಿಂದೆ ಇದೇ ಪ್ರಕರಣದಲ್ಲಿ 41 ವರ್ಷದ ಉದ್ಯಮಿಯೊಬ್ಬರಿಗೆ ತಿರುಮಲ ದೇವಸ್ಥಾನದಲ್ಲಿ ವಿಐಪಿ ದರ್ಶನಕ್ಕೆ ಅನುಕೂಲ ಮಾಡಿಕೊಡುವುದಾಗಿ ಹೇಳಿ ಸೈಬರ್ ಕ್ರಿಮಿನಲ್‌ಗಳು 64,000 ರೂ.ಗಳನ್ನು ವಂಚಿಸಿದ್ದರು.

ಪೊಲೀಸರ ಪ್ರಕಾರ, ವ್ಯಕ್ತಿಗೆ ತಿರುಪತಿ ದೇವಸ್ಥಾನದಲ್ಲಿ ವಿಐಪಿ ದರ್ಶನ ನೀಡುವುದಾಗಿ ವಾಟ್ಸಾಪ್ ಸಂದೇಶ ಬಂದಿತ್ತು. ಕಳುಹಿಸಿದವರು ತಿರುಮಲ ತಿರುಪತಿ ದೇವಸ್ಥಾನದ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದರು. ಈ ಸಂದೇಶಕ್ಕೆ ಪ್ರತಿಕ್ರಿಯಿಸಿದ ಉದ್ಯಮಿ ರಾಕೇಶ್ ಆನಂದ್ ಲಾಲ್ವಾನಿ, ಬುಕಿಂಗ್ ಮೊತ್ತವನ್ನು ಪಾವತಿಸುವಂತೆ ಆರೋಪಿಗಳು ಮನವೊಲಿಸಿದರು. ಆರಂಭದಲ್ಲಿ, ಲಾಲ್ವಾನಿ 30,000 ರೂ.ಗಳನ್ನು ವರ್ಗಾಯಿಸಿದರು, ಮತ್ತು ನಂತರ ತಾಂತ್ರಿಕ ಕಾರಣಗಳನ್ನು ಉಲ್ಲೇಖಿಸಿ 29,000 ರೂ. ಅಲ್ಲದೆ ಹೆಚ್ಚುವರಿಯಾಗಿ 5 ಸಾವಿರ ರೂ. ಹಣ ಪಡೆದಿದ್ದರು. ಇನ್ನು ಲಾಲ್ವಾನಿ ಅವರ ದೂರಿನ ಮೇರೆಗೆ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.

ಈ ಸುದ್ದಿಯನ್ನೂ ಓದಿ: Tirupati laddu row : ತಿರುಪತಿ ದೇವಸ್ಥಾನಕ್ಕೆ ರೇಷ್ಮೆ ಬಟ್ಟೆ ಅರ್ಪಿಸಿದ ಚಂದ್ರಬಾಬು ನಾಯ್ಡು

ತಿರುಪತಿ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ತಯಾರಿಸಲು ಹಿಂದಿನ ಆಂಧ್ರಪ್ರದೇಶ ಸರ್ಕಾರವು ಪ್ರಾಣಿಗಳ ಕೊಬ್ಬನ್ನು ಹೊಂದಿರುವ ಕಳಪೆ ಗುಣಮಟ್ಟದ ತುಪ್ಪವನ್ನು ಬಳಸಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ರಚಿಸಿದೆ.