Friday, 22nd November 2024

Chennai Rain: ಸೂಪರ್‌ ಸ್ಟಾರ್‌ ರಜನಿಕಾಂತ್‌ ಐಷಾರಾಮಿ ಬಂಗಲೆ ಜಲಾವೃತ

rajinikanth

ಚೆನ್ನೈ: ತಮಿಳುನಾಡಿನಲ್ಲಿ ಭಾರೀ ಮಳೆ(Chennai Rain)ಯಾಗುತ್ತಿದ್ದು, ಚೆನ್ನೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಚೆನ್ನೈನಲ್ಲಿ ಸೂಪರ್‌ಸ್ಟಾರ್‌ ರಜನಿಕಾಂತ್(Rajinikanth) ಅವರ ಐಷಾರಾಮಿ ಬಂಗಲೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ.

ನಗರದ ಹೆಗ್ಗುರುತಾಗಿರುವ ಪೋಯಸ್ ಗಾರ್ಡನ್‌ನಲ್ಲಿರುವ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಐಷಾರಾಮಿ ವಿಲ್ಲಾ ಜಲಾವೃತಗೊಂಡಿದೆ, ಆವರಣಕ್ಕೆ ಪ್ರವಾಹದ ನೀರು ನುಗ್ಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಭಾರೀ ಮಳೆಯಿಂದಾಗಿ ನಗರದ ಒಳಚರಂಡಿ ವ್ಯವಸ್ಥೆಯು ಈ ಬಿಕ್ಕಟ್ಟಿಗೆ ಕಾರಣವಾಗಿದೆ. ಆದಾಗ್ಯೂ, ರಜನಿಕಾಂತ್ ಅವರ ನಿವಾಸದ ಸುತ್ತಲಿನ ನೀರನ್ನು ಹೊರತೆಗೆಯಲು ನಾಗರಿಕ ಅಧಿಕಾರಿಗಳು ತುರ್ತು ಕ್ರಮಗಳನ್ನು ಪ್ರಾರಂಭಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ರಜನಿಕಾಂತ್ ಅವರ ನಿವಾಸಕ್ಕೆ ಪ್ರವಾಹ ಎದುರಾಗಿರುವುದು ಇದೇ ಮೊದಲಲ್ಲ; ಮೈಚಾಂಗ್ ಚಂಡಮಾರುತದಿಂದಾಗಿ 2023 ರಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು.

ಚೆನ್ನೈನಲ್ಲಿ ಸಾರಿಗೆ ಅಡಚಣೆ

ಜಲಾವೃತದಿಂದಾಗಿ ದಕ್ಷಿಣ ರೈಲ್ವೆಯು ಚೆನ್ನೈ ಸೆಂಟ್ರಲ್-ಮೈಸೂರು ಕಾವೇರಿ ಎಕ್ಸ್‌ಪ್ರೆಸ್ ಸೇರಿದಂತೆ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ. ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದ ಸಮೀಪದಲ್ಲಿ ಹಲವಾರು ರೈಲುಗಳನ್ನು ಡೈವರ್ಟ್‌ ಮಾಡಲಾಗಿದೆ. ಕೆಲವೊಂದು ವಿಮಾನಗಳ ಸಂಚಾರವನ್ನೂ ಸಹ ರದ್ದುಗೊಳಿಸಲಾಗಿದೆ.

ಹವಾಮಾನ ಎಚ್ಚರಿಕೆ

ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಎರಡು ದಿನಗಳ ಕಾಲ ಹೆಚ್ಚಿನ ಮಳೆಯ ಮುನ್ಸೂಚನೆಯನ್ನು ನೀಡಿದೆ. ತಿರುವಳ್ಳೂರು, ಕಾಂಚೀಪುರಂ, ಚೆಂಗಲ್‌ಪಟ್ಟು ಮತ್ತು ಚೆನ್ನೈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ತಮಿಳುನಾಡಿನಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿದೆ. ವಿಪತ್ತು ಸ್ಪಂದನಾ ತಂಡಗಳು ಸನ್ನದ್ಧ ಸ್ಥಿತಿಯಲ್ಲಿದ್ದು, 219 ದೋಣಿಗಳು ನಿಯೋಜನೆಗೆ ಸಿದ್ಧವಾಗಿವೆ.

ಈ ಸುದ್ದಿಯನ್ನೂ ಓದಿ: Superstar Rajinikanth : ಎರಡು ದಿನದಲ್ಲಿ ರಜಿನಿಕಾಂತ್‌ ಡಿಸ್ಚಾರ್ಜ್‌; ಆಸ್ಪತ್ರೆಯ ಬುಲೆಟಿನ್ ಬಿಡುಗಡೆ