Saturday, 14th December 2024

ಕಳ್ಳಬಟ್ಟಿ ಸಾರಾಯಿ ದುರಂತ: ಮೃತರ ಸಂಖ್ಯೆ 25ಕ್ಕೆ ಏರಿಕೆ

ಚೆನ್ನೈ: ತಮಿಳುನಾಡಿನ ಕಳ್ಳಕುರಿಚಿ ಜಿಲ್ಲೆಯಲ್ಲಿ  ಕಳ್ಳಬಟ್ಟಿ ಸಾರಾಯಿ ಸೇವನೆ ದುರಂತದಲ್ಲಿ ಮೃತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. 60ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ.

ಕರುಣಾಪುರಂ ಕಾಲೋನಿಯವರು ಸೇರಿ ನೂರಾರು ಜನ ಮಂಗಳವಾರ (ಜೂನ್‌ 18) ರಾತ್ರಿ ಕಳ್ಳಬಟ್ಟಿ ಸೇವಿಸಿದ್ದಾರೆ. ಬುಧವಾರ ವಾಂತಿ, ಭೇದಿ ಸೇರಿ ಹಲವು ರೀತಿಯ ಬಾಧೆ ಅನುಭವಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ 49 ವರ್ಷದ ಕನ್ನುಕುಟ್ಟಿ ಎನ್ನುವ ವ್ಯಕ್ತಿಯನ್ನು ಈಗಾಗಲೇ ಬಂಧಿಸಲಾಗಿದ್ದು ಆತನಿಂದ ಸುಮಾರು 200 ಲೀಟರ್‌ ಕಳ್ಳಬಟ್ಟಿ ವಶಪಡಿಸಿಕೊಳ್ಳಲಾಗಿದೆ.