Wednesday, 11th December 2024

Chetan Singh Solanki: ಬಾಂಬೆ ಐಐಟಿ ಪ್ರೊಫೆಸರ್‌ನ ಹರಿದ ಸಾಕ್ಸ್ ಫೋಟೊ ವೈರಲ್! ಅವರ ಉತ್ತರ ಏನಿದೆ ನೋಡಿ!

Chetan Singh Solanki

ಬಾಂಬೆ ಐಐಟಿ ಪ್ರೊಫೆಸರ್ (IIT-Bombay professor) ಚೇತನ್ ಸಿಂಗ್ ಸೋಲಂಕಿ (Chetan Singh Solanki) ಅವರು ಇತ್ತೀಚೆಗೆ ನವದೆಹಲಿಯ (New Delhi) ಐಷಾರಾಮಿ ಹೊಟೇಲ್‌ನಲ್ಲಿ (luxury hotel ) ತಂಗಿದ್ದರು. ಈ ವೇಳೆ ಅವರು ಹರಿದ ಸಾಕ್ಸ್‌ಗಳನ್ನು ಧರಿಸಿರುವುದು ಕೆಮೆರಾ ಕಣ್ಣಲ್ಲಿ ಸೆರೆಯಾಗಿದೆ. ತಿಂಗಳಿಗೆ ಲಕ್ಷಾಂತರ ರೂ. ಸಂಬಳ ಪಡೆಯುವ ಗೌರವಾನ್ವಿತ ಪ್ರಾಧ್ಯಾಪಕರಾಗಿ ಆರಾಮದಾಯಕ ಜೀವನ ನಡೆಸುವ ಇವರು ಹರಿದ ಸಾಕ್ಸ್ ಏಕೆ ಧರಿಸಬೇಕು, ಹೊಸ ಜೋಡಿ ಸಾಕ್ಸ್‌ ಯಾಕೆ ಖರೀದಿ ಮಾಡಬಾರದು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಬಗ್ಗೆ ವ್ಯಾಪಕ ಚರ್ಚೆಯೂ ನಡೆಯುತ್ತಿದೆ.

ಬಟ್ಟೆ, ಶೂಸ್ ಬಗ್ಗೆ ನಾವು ಜಾಸ್ತಿ ತಲೆಕೆಡಿಸಿಕೊಳ್ಳುತ್ತೇವೆ. ಆದರೆ ಅದರ ಒಳಗೆ ಧರಿಸುವ ಬನಿಯಾನ್, ಸಾಕ್ಸ್ ಬಗ್ಗೆ ಹೆಚ್ಚು ಯೋಚಿಸಲು ಹೋಗುವುದಿಲ್ಲ. ಕೈಗೆ ಸಿಕ್ಕಿದ್ದನ್ನು ಹಾಕಿಕೊಳ್ಳುತ್ತೇವೆ. ಇದನ್ನು ಯಾರು ನೋಡುತ್ತಾರೆ ಎನ್ನುವುದು ಜನ ಸಾಮಾನ್ಯರ ಯೋಚನೆ. ಆದರೆ ಕೆಲವೊಮ್ಮೆ ಇದು ನಮ್ಮನ್ನು ಮುಜುಗರಕ್ಕೀಡಾಗುವಂತೆ ಮಾಡುತ್ತದೆ.

ವೈರಲ್ ಆಗಿರುವ ತಮ್ಮ ಫೋಟೋಗೆ ಸೋಲಂಕಿಯವರು ಉತ್ತರವನ್ನೂ ನೀಡಿದ್ದಾರೆ. ʼʼನಾನು ಇದನ್ನು ನಿಭಾಯಿಸಬಲ್ಲೆ. ಆದರೆ ಪ್ರಕೃತಿಯಿಂದ ಹೀಗೆ ಮಾಡಲು ಸಾಧ್ಯವಿಲ್ಲʼʼ ಎಂಬ ಮಾರ್ಮಿಕ ಉತ್ತರ ನೀಡಿದ್ದಾರೆ. ಈ ಮೂಲಕ ಪ್ರೊಫೆಸರ್ ಪ್ರಕೃತಿಯ ಸುಸ್ಥಿರತೆಯ ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ. ತಾವು ಹೊಸ ಸಾಕ್ಸ್‌ ಖರೀದಿಸದಿರುವುದರ ಹಿಂದೆ ಪ್ರಕೃತಿಯ ಮೇಲಿನ ಕಾಳಜಿಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಹೊಸ ದೆಹಲಿಯ ಹಯಾತ್‌ನಲ್ಲಿ ನಡೆದ ಕಾರ್ಯಕ್ಷಮದ ಸನ್ನಿವೇಶ ವೈರಲ್ ಆಗಿರುವುದನ್ನು ನೋಡಿದ ಚೇತನ್ ಸಿಂಗ್ ಸೋಲಂಕಿ ಅವರು ಈ ಕುರಿತು ಲಿಂಕ್ಡ್‌ಇನ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಎಕನಾಮಿಕ್ ಟೈಮ್ಸ್ ಎನರ್ಜಿ ಲೀಡರ್‌ಶಿಪ್ ಶೃಂಗಸಭೆಯಲ್ಲಿ ಅವರ ಭಾಷಣಕ್ಕಾಗಿ ತಯಾರಿ ನಡೆಸುತ್ತಿದ್ದಾಗ ಯಾರೋ ಅವರು ಹರಿದ ಸಾಕ್ಸ್‌ಗಳನ್ನು ಧರಿಸಿರುವ ಫೋಟೋವನ್ನು ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದರು.

Chetan Singh Solanki

ಇದಕ್ಕೆ ಅವರು ಪ್ರತಿಕ್ರಿಯಿಸದೆ ಸುಮ್ಮನಾಗಬಹುದಿತ್ತು. ಆದರೆ ಅವರು ಸುಸ್ಥಿರತೆಯ ಬಗ್ಗೆ ಪ್ರಬಲವಾದ ಸಂದೇಶವನ್ನುನೀಡಲು ಈ ಸಂದರ್ಭವನ್ನು ಬಳಸಿಕೊಂಡರು. ಹೌದು, ನನ್ನ ಹರಿದ ಕಾಲುಚೀಲಗಳು ಬಹಿರಂಗಗೊಂಡಿವೆ. ನಾನು ಅವುಗಳನ್ನು ಬದಲಾಯಿಸಬೇಕಾಗಿದೆ. ಆದರೆ ನಾನು ಈ ಸನ್ನಿವೇಶವನ್ನು ನಿಭಾಯಿಸಬಲ್ಲೆ. ಆದರೆ ಪ್ರಕೃತಿಗೆ ಸಾಧ್ಯವಿಲ್ಲ. ಪ್ರಕೃತಿಯಲ್ಲಿ ಎಲ್ಲವೂ ಸೀಮಿತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಆಯ್ಕೆಯು ಖರೀದಿಸಲು ಅಸಮರ್ಥತೆಯಿಂದ ಉಂಟಾಗುವುದಿಲ್ಲ. ಆದರೆ ಖರೀದಿಸುವುದನ್ನು ನಾನು ತಪ್ಪಿಸಬೇಕು. ಅದಕ್ಕಾಗಿ ನಾನು ಅದನ್ನು ಹೊಲಿಯುತ್ತೇನೆ ಮತ್ತು ಅದನ್ನು ಮತ್ತೆ ಬಳಸುತ್ತೇನೆ ಎಂದು ತಿಳಿಸಿದ್ದಾರೆ. ನನ್ನ ಉತ್ಪಾದಕತೆಯನ್ನು ಹೆಚ್ಚಿಸಲು ನಾನು ಅತ್ಯುತ್ತಮ ಗ್ಯಾಜೆಟ್‌ಗಳನ್ನು ಬಳಸಬಹುದು. ಆದರೆ ನನ್ನ ಇಂಗಾಲದ ಹೆಜ್ಜೆ ಗುರುತನ್ನು ಕಡಿಮೆ ಮಾಡಲು ನಾನು ಕನಿಷ್ಠ ಪ್ರಮಾಣದ ವಸ್ತುಗಳನ್ನು ಬಳಸಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಚೇತನ್ ಸಿಂಗ್ ಸೋಲಂಕಿ ಯಾರು?

ಬಾಂಬೆ ಐಐಟಿ ಪ್ರಾಧ್ಯಾಪಕರಾಗಿರುವ ಚೇತನ್ ಸಿಂಗ್ ಸೋಲಂಕಿ ಅವರು ಭಾರತದ ಸೌರಮಾನವ ಅಥವಾ ಸೌರ ಗಾಂಧಿ ಎಂದೇ ಕರೆಯಲ್ಪಡುತ್ತಾರೆ. ಪರಿಸರ ಅವನತಿ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ ಅವರು ಸೌರಶಕ್ತಿಯನ್ನು ಉತ್ತೇಜಿಸಲು 20 ರಾಜ್ಯಗಳಲ್ಲಿ 43,000 ಕಿ.ಮೀ.ಗಿಂತಲೂ ಹೆಚ್ಚು ಪ್ರಯಾಣಿಸಿದ್ದಾರೆ. ಆದರೆ ಐಷಾರಾಮಿ ಹೋಟೆಲ್‌ನಲ್ಲಿ ಅವರ ಇತ್ತೀಚಿನ ಫೋಟೋ ವೈರಲ್ ಆಗಿರುವುದು ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.

ಕೆಲವರು ಅವರ ತರ್ಕವನ್ನು ಪ್ರಶ್ನಿಸಿದ್ದಾರೆ. ಒಬ್ಬ ವ್ಯಕ್ತಿ, ನಿಮ್ಮ ಮಾತಿನ ಪ್ರಕಾರ ಹರಿದ ಬಟ್ಟೆಗಳನ್ನು ಧರಿಸಬೇಕೇ? ಇದು ನಿರ್ಲಕ್ಷ್ಯವಲ್ಲವೇ ಎಂದಿದ್ದಾರೆ. ಇನ್ನೊಬ್ಬರು, ಸುಸ್ಥಿರತೆಯನ್ನು ಉತ್ತೇಜಿಸುವಲ್ಲಿ ಶಿಷ್ಟಾಚಾರವನ್ನು ಮರೆಯಬೇಡಿ. ಶಿಸ್ತಿನಿಂದ ಪ್ರಸ್ತುತಪಡಿಸದಿದ್ದರೆ ಉತ್ತಮ ಪ್ರಯತ್ನಗಳು ಸಹ ವ್ಯರ್ಥವಾಗಬಹುದು ಎಂದಿದ್ದಾರೆ. ಮತ್ತೊಬ್ಬರು, ಹಯಾತ್‌ನಲ್ಲಿ ಎಸಿಯಲ್ಲಿ ಕುಳಿತು ಹವಾಮಾನ ಬದಲಾವಣೆ ಬಗ್ಗೆ ಮಾತನಾಡುವುದು… ಈ ಜಗತ್ತು ತುಂಬಾ ತಮಾಷೆಯಾಗಿದೆ ಎಂದಿದ್ದಾರೆ.

Iran Attacks Israel: ಅಬ್ಬಾ ಎಂಥಾ ದೃಶ್ಯ! ಇರಾನ್‌ ಕ್ಷಿಪಣಿ ದಾಳಿಯ ಭೀಕರತೆ ವಿಮಾನ ಪ್ರಯಾಣಿಕನ ಮೊಬೈಲ್‌ನಲ್ಲಿ ಸೆರೆ

ಪ್ರೊ. ಸೋಲಂಕಿ ಇದಕ್ಕೆ ಪ್ರತಿಕ್ರಿಯಿಸಿ ʼʼಧ್ಯಾನಕ್ಕಾಗಿ ಹಿಮಾಲಯಕ್ಕೆ ಹೋಗುವ ಆಯ್ಕೆ ಇದೆ. ಆದರೆ ಅದರ ಬಗ್ಗೆ ಮಾತನಾಡುವುದಿಲ್ಲ ಅಥವಾ ಜನರ ಬಳಿಗೆ ಹೋಗುತ್ತೇನೆ. ಅವರೊಂದಿಗೆ ಮಾತನಾಡುತ್ತೇನೆ. ಅವರಲ್ಲಿ ಜಾಗೃತಿ ಮೂಡಿಸುತ್ತೇನೆ. ಈ ಎರಡು ಆಯ್ಕೆಯಲ್ಲಿ ನಾನು ಎರಡನೆಯದನ್ನು ಆರಿಸುತ್ತೇನೆʼʼ ಎಂದು ತಿಳಿಸಿದ್ದಾರೆ.