Monday, 16th September 2024

ಛತ್ತೀಸ್‍ಗಢದ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಇಂದು

ರಾಯ್‍ಪುರ: ಛತ್ತೀಸ್‍ಗಢದ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿಯ ಹೊಸದಾಗಿ ಚುನಾಯಿತ 54 ಶಾಸಕರ ಪ್ರಮುಖ ಸಭೆ ಭಾನುವಾರ ನಡೆಯಲಿದೆ.

ಇತ್ತೀಚೆಗಿನ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಸಿಎಂ ಮುಖ ಘೋಷಣೆ ಮಾಡದೆ ಕಣಕ್ಕಿಳಿಯುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಗಾದಿ ಯಾರಿಗೆ ಒಲಿಯಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಪಕ್ಷದ ಮೂವರು ವೀಕ್ಷಕರು – ಕೇಂದ್ರ ಸಚಿವರಾದ ಅರ್ಜುನ್ ಮುಂಡಾ ಮತ್ತು ಸರ್ಬಾನಂದ ಸೋನೋವಾಲ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್ ಉಪಸ್ಥಿತರಿರುವರು.

ಬಿಜೆಪಿಯ ಛತ್ತೀಸ್‍ಗಢ ಉಸ್ತುವಾರಿ ಓಂ ಮಾಥುರ್, ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ರಾಜ್ಯದ ಪಕ್ಷದ ಸಹ-ಪ್ರಭಾರಿ ನಿತಿನ್ ನಬಿನ್ ಸಹ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಮಾಥುರ್ ಅವರು ಶನಿವಾರ ಸಂಜೆ ರಾಯಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಬಿಜೆಪಿ ಶಾಸಕರ ಸಭೆಯ ಕುರಿತು ಕೇಳಿದ ಪ್ರಶ್ನೆಗೆ, ನಮ್ಮ ಪಕ್ಷದ ವೀಕ್ಷಕರು ಬರುತ್ತಿದ್ದಾರೆ ಮತ್ತು ಅವರು ತೆಗೆದುಕೊಳ್ಳುವ ನಿರ್ಧಾರಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಮಾಥೂರ್ ಹೇಳಿದರು. ಮುಖ್ಯಮಂತ್ರಿ ಆಯ್ಕೆಗೆ ಯಾವುದೇ ಸೂತ್ರ ಇಲ್ಲ ಎಂದರು. ವೀಕ್ಷಕರ ಭೇಟಿಯ ಕುರಿತು ಕೇಳಿದ ಪ್ರಶ್ನೆಗೆ, ಬಿಜೆಪಿಯ ಸಂಸದೀಯ ಮಂಡಳಿಯಿಂದ ಒಂದು ವ್ಯವಸ್ಥೆ ಇದೆ, ಅದನ್ನು ಅನುಸರಿಸಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *