ನವದೆಹಲಿ: ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ನಂದ್ ಕುಮಾರ್ ಬಘೇಲ್ ಅವರನ್ನು ಮಂಗಳವಾರ ಬಂಧಿಸಿದ್ದು, 15 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ನೀಡಲಾಗಿದೆ.
ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ತನ್ನ ತಂದೆಯ ಮೇಲೆ ಎಫ್‌ಐಆರ್ ದಾಖಲಾಗಿ ದ್ದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಘೇಲ್, ಸರಕಾರಕ್ಕೆ ಯಾರೂ ಕಾನೂನಿಗಿಂತ ಮೇಲಲ್ಲ ಎಂದು ಒತ್ತಿ ಹೇಳಿದರು.
ಟೀಕೆ ಮಾಡಿದವರು ಮುಖ್ಯಮಂತ್ರಿಯ ತಂದೆಯಾಗಿದ್ದರೂ ನನ್ನ ಸರಕಾರದಲ್ಲಿ ಯಾರೂ ಕಾನೂನಿಗಿಂತ ಮಿಗಿಲಲ್ಲ. ಮುಖ್ಯ ಮಂತ್ರಿಯಾಗಿ, ವಿವಿಧ ಸಮುದಾಯ ಗಳ ನಡುವೆ ಸಾಮರಸ್ಯ ಕಾಪಾಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಸಮುದಾಯದ ಬಗ್ಗೆ ಹೇಳಿಕೆ ನೀಡಿದ್ದರೆ ನನ್ನನ್ನು ಕ್ಷಮಿಸಿ. ಕಾನೂನು ಕ್ರಮ ಕೈಗೊಳ್ಳ ಲಾಗುವುದು” ಎಂದು ಭೂಪೇಶ್ ಬಘೇಲ್ ತಿಳಿಸಿದರು.
ಇತ್ತೀಚೆಗೆ ಉತ್ತರಪ್ರದೇಶಕ್ಕೆ ಭೇಟಿ ನೀಡಿದ್ದ ನಂದ್ ಕುಮಾರ್ ಬಘೇಲ್ , ಬ್ರಾಹ್ಮಣರನ್ನು ಗಂಗಾ ನದಿಯಿಂದ ವೋಲ್ಗಾಕ್ಕೆ ಕಳುಹಿಸಲಾಗುವುದು. ಅವರು ವಿದೇಶಿಯರು. ಬ್ರಾಹ್ಮಣರನ್ನು ತಮ್ಮ ಹಳ್ಳಿಗೆ ಪ್ರವೇಶಿಸದಂತೆ ನಾನು ಗ್ರಾಮಸ್ಥರನ್ನು ಒತ್ತಾಯಿ ಸುತ್ತೇನೆ “ಎಂದು ಹೇಳಿದ್ದರು.