Sunday, 24th November 2024

ಛತ್ತೀಸ್‌ಗಢ ಶಾಸಕ ದೇವವ್ರತ್ ಸಿಂಗ್ ನಿಧನ

ರಾಯ್‌ಪುರ: ಜನತಾ ಕಾಂಗ್ರೆಸ್ ಛತ್ತೀಸ್‌ಗಢ ಶಾಸಕ ಮತ್ತು ಮಾಜಿ ಸಂಸದ ದೇವವ್ರತ್ ಸಿಂಗ್ ಅವರು ಗುರುವಾರ ಹೃದಯಾಘಾತದಿಂದ ನಿಧನರಾದರು.

52 ವರ್ಷದ ಶಾಸಕ ದೇವವ್ರತ್ ಅವರಿಗೆ ಎದೆ ನೋವು ಕಾಣಿಸಿಕೊಂಡ ನಂತರ ಅವರನ್ನು ರಾಯ್‌ಪುರದಿಂದ ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯ ಖೈರಗಢ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಮೃತ ಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಮಧ್ಯಾಹ್ನ ಎದೆನೋವು ಕಾಣಿಸಿಕೊಂಡಿತು. ನಂತರ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು, ಎಂದು ಶಾಸಕರ ಹತ್ತಿರದ ಸಂಬಂಧಿ ಸುನಿಲ್ ಸಿಂಗ್ ತಿಳಿಸಿದ್ದಾರೆ. ಜನತಾ ಕಾಂಗ್ರೆಸ್ ನಾಯಕನ ಅಂತಿಮ ವಿಧಿವಿಧಾನಗಳು ಖೈರಾಘಢದಲ್ಲಿ ನಡೆಯಲಿದೆ. ದೇವವ್ರತ್ ಸಿಂಗ್ ಅವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ ಎಂದು ಸಂಬಂಧಿಕರು ಹೇಳಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಛತ್ತೀಸ್‌ಗಢ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿದ್ದ ವೇಳೆ ಶಾಸಕರಿಗೆ ಕರೋನಾ ಸೋಂಕು ತಗುಲಿತ್ತು.