ಬಾಲೋಡ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ ಎಸ್ಯುವಿ ಕಾರಿನಲ್ಲಿ ಇದ್ದ ಎಲ್ಲರೂ ಮೃತ ಪಟ್ಟಿದ್ದಾರೆ. ಅದರಲ್ಲಿ 10 ಮಂದಿ ಸ್ಥಳದಲ್ಲೇ ಸತ್ತಿದ್ದು, ಮಗು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಜೀವವೂ ಹೋಗಿದೆ.
ಎಸ್ಯುವಿ ಕಾರಿನಲ್ಲಿ ಇದ್ದವರೆಲ್ಲ ಧಮ್ತರಿ ಜಿಲ್ಲೆಯ ಸೋರಮ್-ಭಟ್ಗಾಂವ್ ಹಳ್ಳಿಯ ವರು. ಇವರು ಕಂಕೇರ್ ಜಿಲ್ಲೆಯ ಮರ್ಕ್ಟೋಲಾ ಎಂಬ ಊರಿಗೆ, ಮದುವೆ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲೆಂದು ತೆರಳುತ್ತಿದ್ದರು.
ಜಾಗ್ತಾರಾ ಎಂಬ ಗ್ರಾಮದ ಬಳಿ ಅವರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಪೂರೂರ್ ಪೊಲೀಸ್ ಠಾಣೆ ಅಧಿಕಾರಿ ಸಹು ತಿಳಿಸಿದ್ದಾರೆ. ಅಪಘಾತವಾಗುತ್ತಿದ್ದಂತೆ ಟ್ರಕ್ ಡ್ರೈವರ್ ನಾಪತ್ತೆಯಾಗಿದ್ದಾನೆ. ಅವನನ್ನು ಪತ್ತೆ ಮಾಡಲು ಪೊಲೀಸರು ಕಾರ್ಯಾ ಚರಣೆ ನಡೆಸುತ್ತಿದ್ದಾರೆ.