ಬಲೋದ್: ಛತ್ತೀಸ್‌ಗಢದ(Chhattisgarh) ಬಲೋದ್(Balod) ಜಿಲ್ಲೆಯಲ್ಲಿ ಟ್ರಕ್ ಮತ್ತು ಎಸ್‌ಯುವಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಆರು ಜನರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 7 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.(Chhattisgarh Accident)
ದೊಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾನುಪ್ರತಾಪುರ ರಸ್ತೆಯ ಚೌರಪವಾಡ ಬಳಿ ಇಂದು(ಡಿ.16) ಮುಂಜಾನೆ ಭೀಕರ ಅಪಘಾತ(Deadly Accident) ಸಂಭವಿಸಿದೆ. ಎದುರಿನಿಂದ ಬರುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ರಾಜನಂದಗಾಂವ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿರುವ ಮಾಹಿತಿಯಿದೆ. ಅಪಘಾತದ ವಿವರಗಳನ್ನು ಒದಗಿಸಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಅಶೋಕ್ ಜೋಶಿ, ಆರೋಪಿ ಟ್ರಕ್ ಚಾಲಕ ಅಪಘಾತ ನಡೆದ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಪತ್ತೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
बालोद में भीषण सड़क हादसा: 6 की मौत, 7 गंभीर घायल#bastartalkies #bastartalkiesnews #RoadAccident #ChhattisgarhNews #balod pic.twitter.com/GwkREwH0vl
— Bastar Talkies (@BastarTalkies) December 16, 2024
ಡಿಕ್ಕಿಯ ರಭಸಕ್ಕೆ ಕಾರು ತೀವ್ರವಾಗಿ ಜಖಂಗೊಂಡಿದೆ. ಅಪಘಾತ ಸಂಭವಿಸಿದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳೀಯರ ನೆರವಿನಿಂದ ಸಾಕಷ್ಟು ಪ್ರಯತ್ನದ ನಂತರ ಕಾರಿನಲ್ಲಿ ಸಿಲುಕಿದ್ದವರನ್ನು ಹೊರ ತೆಗೆಯಲಾಗಿದೆ. ಮಾಹಿತಿ ಪ್ರಕಾರ ಕಾರಿನಲ್ಲಿದ್ದವರು ದುಂಡಿಯ ಕುಂಭಕರ್ ಎಂಬಲ್ಲಿನ ತಮ್ಮ ಸಂಬಂಧಿಕರ ಮನೆಯಲ್ಲಿ ಭಾನುವಾರ ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದು, ತಮ್ಮ ಗ್ರಾಮ ಗುರೇಡಕ್ಕೆ ವಾಪಸಾಗುತ್ತಿದ್ದ ವೇಳೆ ದುಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಭಾನು ಪ್ರತಾಪುರ-ದಳ್ಳಿ ರಾಜಹಾರ ಮುಖ್ಯರಸ್ತೆಯ ಚೌರಪದವ್ ಬಳಿ ಅವರ ಕಾರಿಗೆ ಟ್ರಕ್ಕೊಂದು ಡಿಕ್ಕಿ ಹೊಡೆದಿದೆ. ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ದುರ್ಪತ್ ಪ್ರಜಾಪತಿ (30), ನಾಲ್ವರು ಮಹಿಳೆಯರು ಸುಮಿತ್ರಾ ಬಾಯಿ ಕುಂಭಕರ್ (50), ಮನಿಶಾ ಕುಂಭಕರ್ (35), ಸಗುನ್ ಬಾಯಿ ಕುಂಭಕರ್ (50) ಮತ್ತು ಇಮ್ಲಾ ಬಾಯಿ (55) ಮತ್ತು ಬಾಲಕ ಜಿಗ್ನೇಶ್ ಕುಂಭಕರ್ (7) ಎಂದು ಗುರುತಿಸಲಾಗಿದೆ.
ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರ ಸಾವು
ಶಬರಿಮಲೆ ಯಾತ್ರಾರ್ಥಿಗಳಿದ್ದ ಬಸ್ ಗೆ ಕಾರು ಢಿಕ್ಕಿಯಾಗಿ ಇತ್ತೀಚೆಗಷ್ಟೆ ವಿವಾಹವಾಗಿದ್ದ ನವದಂಪತಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ನಿನ್ನೆ(ಡಿ.15) ಮುಂಜಾನೆ ಸುಮಾರು 4.15ರ ವೇಳೆಗೆ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ. ಪುನಲೂರ್-ಮುವತ್ತುಪುಳ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು,ಮೃತರು ಪ್ರಯಾಣಿಸುತ್ತಿದ್ದ ಕಾರು ಶಬರಿಮಲೆ ಯಾತ್ರಾರ್ಥಿಗಳಿದ್ದ ಬಸ್ಸಿಗೆ ಕೊನ್ನಿಯ ಮುರಿಂಜಕ್ಕಲ್ ಬಳಿ ಢಿಕ್ಕಿ ಹೊಡೆದಿದೆ. ಮೃತರನ್ನು ನಿಖಿಲ್, ಅವರ ಪತ್ನಿ ಅನು, ಅನು ತಂದೆ ಬಿಜು ಪಿ. ಜಾರ್ಜ್ ಹಾಗೂ ನಿಖಿಲ್ ತಂದೆ ಮಥಾಯಿ ಈಪೆನ್ ಎಂದು ಗುರುತಿಸಲಾಗಿದ್ದು, ಅವರೆಲ್ಲರನ್ನು ವಟ್ಟಕುಳಂನ ಮಲಸ್ಸೇರಿ ಗ್ರಾಮದವರು ಎನ್ನಲಾಗಿದೆ
ಈ ಸುದ್ದಿಯನ್ನೂ ಓದಿ:HD Kumaraswamy: ದಿಲ್ಲಿಯಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ HDK ಬರ್ತ್ ಡೇ ಸೆಲೆಬ್ರೇಶನ್- ವಿಡಿಯೊ ಇದೆ