ರಾಯ್‌ಪುರ: ಸಹ ಸೈನಿಕನೊಬ್ಬ ನಡೆಸಿದ ಗುಂಡಿನ ದಾಳಿಗೆ ಇಬ್ಬರು ಸಶಸ್ತ್ರ ಪಡೆ(CAF) ಯೋಧರು ಹುತಾತ್ಮರಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಡ(Chhattisgarh Horror)ದಲ್ಲಿ ನಡೆದಿದೆ. ರಾಯ್‌ಪುರದಿಂದ ಸುಮಾರು 400 ಕಿಮೀ ದೂರದಲ್ಲಿರುವ ಸಮ್ರಿ ಪಥ್ ಪೊಲೀಸ್ ಠಾಣೆ ವ್ಯಾಪ್ತಿಯ ಭೂತಾಹಿ ಮೋಡ್ ಪ್ರದೇಶದಲ್ಲಿ ಸಿಎಎಫ್‌ನ 11ನೇ ಬೆಟಾಲಿಯನ್‌ನ ‘ಬಿ’ ಕಂಪನಿಯ ಶಿಬಿರದಲ್ಲಿ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಸುರ್ಗುಜಾ ಶ್ರೇಣಿ) ಅಂಕಿತ್ ಗಾರ್ಗ್ ತಿಳಿಸಿದ್ದಾರೆ.
ಕಾನ್‌ಸ್ಟೇಬಲ್ ಅಜಯ್ ಸಿದರ್ ತನ್ನ ಸರ್ವೀಸ್ ರಿವಾಲ್ವರ್‌ನಿಂದ ಇನ್ಸಾಸ್ ರೈಫಲ್‌ನಿಂದ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ. ಕಾನ್‌ಸ್ಟೇಬಲ್ ರೂಪೇಶ್ ಪಟೇಲ್ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಸಂದೀಪ್ ಪಾಂಡೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಇನ್ನಿಬ್ಬರು ಸಿಬ್ಬಂದಿಗಳಾದ ಅಂಬುಜ್ ಶುಕ್ಲಾ ಮತ್ತು ರಾಹುಲ್ ಬಘೇಲ್ ಗಾಯಗೊಂಡಿದ್ದು, ಅವರನ್ನು ಕುಸ್ಮಿಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶುಕ್ಲಾ ಅವರನ್ನು ಅಂಬಿಕಾಪುರಕ್ಕೆ ಸ್ಥಳಾಂತರಿಸಲಾಗಿದೆ.
ಆರೋಪಿ ಅರೆಸ್ಟ್
ಇನ್ನು ಇಬ್ಬರು ಯೋಧರನ್ನು ಬಲಿ ಪಡೆದ ಆರೋಪು ಅಜಯ್‌ನನ್ನು ತಕ್ಷಣ ಅರೆಸ್ಟ್ ಮಾಡಲಾಗಿದೆ. ಗುಂಡೇಟಿನ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಸಹೋದ್ಯೋಗಿಗಳು ಆರೋಪಿ ಅಜಯ್ ಕೈಯಿಂದ ಬಂದೂಕು ಕಸಿದು ಆತನನ್ನು ಸೆರೆಹಿಡಿದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುಂಡಿನ ದಾಳಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಮತ್ತು ತನಿಖೆ ನಡೆಯುತ್ತಿದೆ ಎಂದು ಗಾರ್ಗ್ ಹೇಳಿದ್ದಾರೆ. ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ಸಿಎಎಫ್ ಜಾರ್ಖಂಡ್ ಗಡಿಯ ಬಳಿ ಬೀಡುಬಿಟ್ಟಿದೆ.
बलरामपुर। CAF कैंप में जवानों के बीच आपस में हुई गोलीबारी, एक जवान की मौत तीन घायल.@BalrampurDist #Chhattisgarh #gunshot #CRPF pic.twitter.com/7Zfd9MEc53
— Haribhoomi (@Haribhoomi95271) September 18, 2024
ಸೋಮವಾರವಷ್ಟೇ ಭದ್ರತಾ ಸಿಬ್ಬಂದಿ ಛತ್ತೀಸ್‌ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯ ವಿವಿಧ ಸ್ಥಳಗಳಿಂದ ಮೂರು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಂಡಿದ್ದರು.
ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಮತ್ತು ಅದರ ಗಣ್ಯ C-208 CoBRA ಬೆಟಾಲಿಯನ್ ಸಲಾಟಾಂಗ್ ಭದ್ರತಾ ಶಿಬಿರದ ಬಳಿ ರಸ್ತೆ ಭದ್ರತಾ ಕಾರ್ಯಾಚರಣೆಯಲ್ಲಿ 5 ಕೆಜಿ ಮತ್ತು 3 ಕೆಜಿ ತೂಕದ ಎರಡು ಟಿಫಿನ್ IED ಗಳನ್ನು ಪತ್ತೆ ಮಾಡಿದೆ. ಹೆಚ್ಚುವರಿಯಾಗಿ, CRPF ನ D-50 ಬೆಟಾಲಿಯನ್ ಮತ್ತು ಜಿಲ್ಲಾ ಪಡೆ 8 ರಿಂದ 10 ಕೆಜಿ ತೂಕದ ಮತ್ತೊಂದು ಟಿಫಿನ್ IED ಅನ್ನು ಡಬ್ಬಕೊಂಟಾ ಮತ್ತು ಪೆಂಟಪಾಡ್ ನುಲ್ಲಾ ಬಳಿಯ ರಸ್ತೆಯ ಬಳಿ ವಶಕ್ಕೆ ಪಡೆದಿದೆ. ವಶಪಡಿಸಿಕೊಂಡ ಎಲ್ಲಾ ಐಇಡಿಗಳನ್ನು ಬಾಂಬ್ ನಿಷ್ಕ್ರಿಯ ದಳವು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಿದೆ.
ಸುಕ್ಮಾವನ್ನು ಒಳಗೊಂಡಿರುವ ಬಸ್ತಾರ್ ವಿಭಾಗದಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಲು ಮಾವೋವಾದಿಗಳು ಆಗಾಗ್ಗೆ ಸ್ಫೋಟಕಗಳನ್ನು ಬಳಸುತ್ತಾರೆ.
ಈ ಸುದ್ದಿಯನ್ನೂ ಓದಿ: Naxals encounter: ಮತ್ತೆ ನಕ್ಸಲ್ ಬೇಟೆ; ಟಾಪ್ ಲೀಡರ್ ಸೇರಿ 6 ಮಾವೋವಾದಿಗಳ ಎನ್‌ಕೌಂಟರ್