Wednesday, 18th December 2024

Chia Seeds Benefits: ಕೂದಲಿನ ಬೆಳವಣಿಗೆಗೆ ಚಿಯಾ ಬೀಜಗಳು ಬಳಸುವುದು ಹೇಗೆ?

Chia Seeds Benefits

ಚಿಯಾ ಬೀಜಗಳು(Chia Seeds Benefits) ಆರೋಗ್ಯಕ್ಕೆ ತುಂಬಾ ಒಳ್ಳೆಯದು.  ಪ್ರೋಟೀನ್, ಫೈಬರ್, ಒಮೆಗಾ -3 ಕೊಬ್ಬಿನಾಮ್ಲಗಳು, ಆ್ಯಂಟಿ ಆಕ್ಸಿಡೆಂಟ್‍ಗಳು ಮತ್ತು ಅಗತ್ಯ ಖನಿಜಗಳಿಂದ ತುಂಬಿರುವ ಅವುಗಳನ್ನು ಹೆಚ್ಚಾಗಿ ಸೂಪರ್‌ಫುಡ್‌ ಎಂದು ಹೇಳಲಾಗುತ್ತದೆ. ಈ ಸಣ್ಣ ಬೀಜಗಳು ಉತ್ತಮ ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತವೆ, ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಇವು  ಕೂದಲಿನ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತವೆ. ಹಾಗಾದ್ರೆ ಅವುಗಳನ್ನು ಕೂದಲಿನ ಆರೋಗ್ಯಕ್ಕಾಗಿ  ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಹೆಚ್ಚಿನ ಪ್ರಮಾಣದ ಪ್ರೋಟೀನ್
ಕೆರಾಟಿನ್ ಒಂದು ರೀತಿಯ ಪ್ರೋಟೀನ್ ಆಗಿದ್ದು, ಇದು ಕೂದಲಿಗೆ ತುಂಬಾ ಒಳ್ಳೆಯದು. ಚಿಯಾ ಬೀಜಗಳು ಸಸ್ಯ ಆಧಾರಿತ ಪ್ರೋಟೀನ್‍ ಅನ್ನು ಒದಗಿಸುತ್ತವೆ. ನೀವು ಸಾಕಷ್ಟು ಪ್ರೋಟೀನ್ ಸೇವಿಸಿದರೆ ಕೂದಲನ್ನು ಉತ್ಪಾದಿಸಲು ಮತ್ತು ಸರಿಪಡಿಸಲು ದೇಹಕ್ಕೆ ಸಾಧ್ಯವಾಗುತ್ತದೆ.

Chia Seeds Benefits

ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧಿವಾಗಿದೆ
ಒಮೆಗಾ -3 ಕೊಬ್ಬಿನಾಮ್ಲಗಳು, ವಿಶೇಷವಾಗಿ ಆಲ್ಫಾ-ಲಿನೋಲೆನಿಕ್ ಆಮ್ಲ (ಎಎಲ್ಎ) ಚಿಯಾ ಬೀಜಗಳಲ್ಲಿ ಹೇರಳವಾಗಿವೆ. ಕೂದಲಿನ ಕಿರುಚೀಲಗಳು ಒಮೆಗಾ -3 ಕೊಬ್ಬಿನಾಮ್ಲಗಳಿಂದ ಪೋಷಿಸಲ್ಪಡುತ್ತವೆ, ಇದು ಕೂದಲಿನ ನಮ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಫೈಬರ್ ಸಮೃದ್ಧವಾಗಿದೆ
ಚಿಯಾ ಬೀಜಗಳಲ್ಲಿ ಹೇರಳವಾಗಿರುವ ಆಹಾರದ ನಾರಿನಂಶವು ಜೀರ್ಣಕಾರಿ ಆರೋಗ್ಯವನ್ನು ಉತ್ತೇಜಿಸುತ್ತದೆ. ಉತ್ತಮ ಕೂದಲಿಗೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳು ಸೇರಿದಂತೆ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುತ್ತದೆ. 

ಆ್ಯಂಟಿ ಆಕ್ಸಿಡೆಂಟ್‍ಗಳಿಂದ ಸಮೃದ್ಧವಾಗಿದೆ
ಚಿಯಾ ಬೀಜಗಳಲ್ಲಿ ಕಂಡುಬರುವ ಅನೇಕ ಆ್ಯಂಟಿ ಆಕ್ಸಿಡೆಂಟ್‍ಗಳು  ನೆತ್ತಿ ಮತ್ತು ಕೂದಲನ್ನು ಫ್ರೀ ರಾಡಿಕಲ್-ಪ್ರೇರಿತ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದರಿಂದ ಕೂದಲು ಉದುರುವಿಕೆ ಮತ್ತು ಹಾನಿಗೊಳಗಾಗುವುದನ್ನು ತಡೆಯಬಹುದು.

ರಕ್ತದ ಹರಿವು ಹೆಚ್ಚಳ
ಚಿಯಾ ಬೀಜಗಳಲ್ಲಿ ಹೆಚ್ಚಿನ ಪೋಷಕಾಂಶಗಳು, ವಿಶೇಷವಾಗಿ ಒಮೆಗಾ -3 ಕೊಬ್ಬಿನಾಮ್ಲಗಳು ಇರುವುದರಿಂದ, ಅವು ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಆರೋಗ್ಯಕರ ಕೂದಲಿನ ಬೆಳವಣಿಗೆಗಾಗಿ, ಕೂದಲಿನ ಕಿರುಚೀಲಗಳು ಸಾಕಷ್ಟು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸಿಗುತ್ತದೆ.

ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಚಿಯಾ ಬೀಜಗಳನ್ನು ಈ ರೀತಿಯಲ್ಲಿ ಸೇವಿಸಬಹುದು:

1-2 ಚಮಚ ಚಿಯಾ ಬೀಜಗಳನ್ನು ನೀರಿನಲ್ಲಿ 15-20 ನಿಮಿಷಗಳ ಕಾಲ ನೆನೆಸಿ, ಅವು ಜೆಲ್ ರೂಪಕ್ಕೆ ಬಂದ  ನಂತರ, ಅವುಗಳನ್ನು ಸ್ಮೂಥಿಗಳು, ಮೊಸರು, ಮ್ಯೂಸ್ಲಿ ಅಥವಾ ಸೂಪ್‍ಗಳಲ್ಲಿ ಸೇರಿಸಿ.

ಧಾನ್ಯಗಳು, ಸಲಾಡ್ ಗಳು, ಟೋಸ್ಟ್, ಮೊಸರು ಮತ್ತು ಮ್ಯೂಸ್ಲಿಗಳಿಗೆ ಚಿಯಾ ಬೀಜಗಳನ್ನು ಸಿಂಪಡಿಸಿ ಸೇವಿಸಿ.

Chia Seeds Benefits

ಚಿಯಾ ಪುಡ್ಡಿಂಗ್ ತಯಾರಿಸಿ ಸೇವಿಸಿ. ಚಿಯಾ ಪುಡ್ಡಿಂಗ್ ತಯಾರಿಸಲು, ಚಿಯಾ ಬೀಜಗಳನ್ನು ಇಡೀ ರಾತ್ರಿ ನೆನೆಸಿಡಿ.

ಈ ಸುದ್ದಿಯನ್ನೂ ಓದಿ:ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆ? ವ್ಯಾಯಾಮಕ್ಕೂ ಮುನ್ನ ಈ ಜ್ಯೂಸ್‌ ಕುಡಿದು ನೋಡಿ!

ನಿಮ್ಮ ಕೂದಲನ್ನು ಆಳವಾಗಿ ಚಿಕಿತ್ಸೆ ಮಾಡಲು ಮತ್ತು ಹೊಳೆಯಲು, ಚಿಯಾ ಬೀಜಗಳನ್ನು ಹೇರ್‌ಮಾಸ್ಕ್ ಗೆ ಬೆರೆಸಿ ಬಳಸಿ.