Thursday, 12th December 2024

ಸಸ್ಯಹಾರಿ ಆಹಾರದಲ್ಲಿ ಚಿಕನ್ ಪೀಸ್ ಪತ್ತೆ: ಸ್ವಿಗ್ಗಿ ವಿರುದ್ದ ದೂರು

ಚೆನ್ನೈ: ವ್ಯಕ್ತಿಯೋರ್ವ ಸ್ವಿಗ್ಗಿಯಲ್ಲಿ ಸಸ್ಯಹಾರಿ ಆಹಾರವನ್ನು ಆರ್ಡರ್ ಮಾಡಿದ್ದು, ಊಟ ಮಾಡುವ ಸಂದರ್ಭ ಊಟದಲ್ಲಿ ಚಿಕನ್ ಪೀಸ್ ಪತ್ತೆ ಯಾಗಿದ್ದು ಫುಡ್ ಡೆಲಿವರಿ ಕಂಪೆನಿ ವಿರುದ್ಧ ಕಿಡಿಕಾರಿದ್ದಾರೆ.

ಕೋ ಶೇಶಾ ಎಂಬ ತಮಿಳು ಗೀತೆ ರಚನಕಾರರು ಸಸ್ಯಹಾರಿಯಾಗಿದ್ದು, ಗೋಬಿ ಮಂಚೂರಿ ವಿತ್ ಕಾರ್ನ್ ಫ್ರೈಡ್ ರೈಸ್‍ನ್ನು ಆರ್ಡರ್ ಮಾಡಿದ್ದರು. ಆದರೆ ತಿಂಡಿಯಲ್ಲಿ ಚಿಕನ್ ಪೀಸ್ ಇರುವುದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಸ್ವಿಗ್ಗಿಯು ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ. ಘಟನೆ ಸಂಬಂಧಿಸಿ ಸ್ವಿಗ್ಗಿ ಅವರು ಕ್ಷಮೆಯಾಚಿಸಿ 70 ರೂ. ಪರಿಹಾರವನ್ನು ಅಷ್ಟೇ ನೀಡಿದೆ ಎಂದು ಆರೋಪಿಸಿದ್ದಾರೆ.