Saturday, 14th December 2024

ಗಣಿತ ಪರೀಕ್ಷೆಗೆ ಗೈರು: ಬಾಲ್ಯವಿವಾಹ ಪ್ರಕರಣ ಬಯಲು

ರಂಗಬಾದ್‌: ಮಹಾರಾಷ್ಟ್ರ ಪ್ರೌಢ ಶಿಕ್ಷಣ ಮಂಡಳಿಯ ಗಣಿತ ಪರೀಕ್ಷೆಗೆ ವಿದ್ಯಾರ್ಥಿನಿಯೊಬ್ಬಳು ಗೈರಾ ಗಿದ್ದು, ಇದಕ್ಕೆ ಬಾಲ್ಯವಿವಾಹ ಪ್ರಕರಣ ಎಂದು ಹೇಳಲಾಗಿದೆ.

ಬೀಡ್‌ ಜಿಲ್ಲೆಯ ಪರ್ಲಿ ತಾಲ್ಲೂಕಿನಲ್ಲಿ ಈ ಬಾಲ್ಯ ವಿವಾಹ ನಡೆದಿದೆ. 16 ವರ್ಷ ವಯಸ್ಸಿನ ವಿದ್ಯಾರ್ಥಿನಿಯನ್ನು 24 ವರ್ಷ ವಯಸ್ಸಿನ ವ್ಯಕ್ತಿ ಜೊತೆ ಮದುವೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 13 ಮಂದಿ ಮತ್ತು ಮದುವೆಗೆ ಹಾಜರಾದ 150ರಿಂದ 200 ಅತಿಥಿಗಳ ವಿರುದ್ಧ ಪ್ರಕರಣ ದಾಖಲಿಸ ಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಣಿತ ಪರೀಕ್ಷೆಗೆ ವಿದ್ಯಾರ್ಥಿನಿ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಾಮಾಜಿಕ ಕಾರ್ಯ ಕರ್ತರೊಬ್ಬರು ಮಕ್ಕಳ ಸಹಾಯವಾಣಿ- 1098ಕ್ಕೆ ಕರೆ ಮಾಡಿ ದೂರು ನೀಡಿದ್ದರು.

ಗ್ರಾಮ ಸೇವಕರು ವಿದ್ಯಾರ್ಥಿನಿಯ ಮನೆಗೆ ತೆರಳಿ ಪರಿಶೀಲನೆ ನಡೆಸಿದ ವೇಳೆ ವಿದ್ಯಾರ್ಥಿನಿಗೆ ಈಗಾಗಲೇ ಮದುವೆ ಮಾಡಿರುವ ವಿಚಾರ ತಿಳಿದುಬಂದಿತು.