ಪಾಟ್ನಾ: ಬಿಹಾರದಲ್ಲಿ ಬರೋಬ್ಬರಿ ಎಂಟು ಮಕ್ಕಳು ನೀರಲ್ಲಿ ಮುಳುಗಿ(Children Drowned) ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬಿಹಾರ(Bihar) ಔರಂಗಾಬಾದ್‌ನಲ್ಲಿ ನಡೆದಿದೆ. ಔರಂಗಾಬಾದ್ ಜಿಲ್ಲೆಯ ಎರಡು ವಿವಿಧ ಗ್ರಾಮಗಳಲ್ಲಿ ಬುಧವಾರ ‘ಜೀವಿತ್ಪುತ್ರಿಕ’ ಹಬ್ಬದ ಸಂದರ್ಭದಲ್ಲಿ ಏಳು ಬಾಲಕಿಯರು ಸೇರಿದಂತೆ ಎಂಟು ಮಂದಿ ಅಪ್ರಾಪ್ತರು ಕೊಳದಲ್ಲಿ ಸ್ನಾನ ಮಾಡುವಾಗ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದನ್‌ಪುರ ಬ್ಲಾಕ್‌ನ ಕುಶಾಹಾ ಗ್ರಾಮ ಮತ್ತು ಬರುನ್ ಬ್ಲಾಕ್‌ನ ಇಟಾಹತ್ ಗ್ರಾಮದಲ್ಲಿ ತಲಾ ನಾಲ್ವರು ಎರಡು ಪ್ರತ್ಯೇಕ ಕೊಳಗಳಲ್ಲಿ ಮುಳುಗಿದ್ದಾರೆ. ಇನ್ನು ಮೃತ ದುರ್ದೈವಿಗಳನ್ನು ಪಂಕಜ್ ಕುಮಾರ್ (8), ಸೋನಾಲಿ ಕುಮಾರಿ (13), ನಿಲಮ್ ಕುಮಾರಿ (12), ರಾಖಿ ಕುಮಾರಿ (12), ಅಂಕು ಕುಮಾರಿ (15), ನಿಶಾ ಕುಮಾರಿ (12), ಚುಲ್ಬುಲ್ ಕುಮಾರಿ (13), ಲಾಜೋ ಕುಮಾರಿ ಎಂದು ಗುರುತಿಸಲಾಗಿದೆ. (15), ರಾಶಿ ಕುಮಾರಿ (18) ಎಂದು ಗುರುತಿಸಲಾಗಿದೆ.
ಪಿಟಿಐ ಜತೆ ಮಾತನಾಡಿದ ಜಿಲ್ಲಾಧಿಕಾರಿ ಶ್ರೀಕಾಂತ್ ಶಾಸ್ತ್ರಿ, ‘ಜೀವಿತಪುತ್ರಿಕಾ’ ಹಬ್ಬದ ನಿಮಿತ್ತ ಜನ ತಮ್ಮ ಕುಟುಂಬ ಸದಸ್ಯರೊಂದಿಗೆ ಕೆರೆಗಳಲ್ಲಿ ಪುಣ್ಯಸ್ನಾನ ಮಾಡಿ, ಮಹಿಳೆಯರು ಕ್ಷೇಮಕ್ಕಾಗಿ ಉಪವಾಸ ವ್ರತಾಚರಣೆ ಕೈಗೊಳ್ಳುತ್ತಾರೆ. ಇದೇ ರೀತಿ ಪುನ್ಯ ಸ್ನಾನದ ವೇಳೆ ಮಕ್ಕಳು ನೀರಲ್ಲಿ ಮುಳುಗಿ ಮೃತಪಟ್ಟಿದ್ಧಾರೆ. ಮುಳುಗಿರುವ ಮಕ್ಕಳನ್ನು ಹೊರತೆಗೆದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿಗೆ ತಲುಪುವ ಮುನ್ನವೇ ಅಪ್ರಾಪ್ತರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾವಿಗೆ ಸಂತಾಪ ಸೂಚಿಸಿದ್ದು, ಮೃತರ ಮುಂದಿನ ಕುಟುಂಬಗಳಿಗೆ ತಲಾ ₹ 4 ಲಕ್ಷ ಪರಿಹಾರ ಘೋಷಿಸಿದ್ದಾರೆ.
ವಾರದ ಹಿಂದೆ ಇಂತಹದ್ದೇ ಒಂದು ತುಮಕೂರಿನ ತುರುವೆಕೆಯಲ್ಲಿ ನಡೆದಿತ್ತು. ಗಣೇಶ ಮೂರ್ತಿ ವಿಸರ್ಜನೆಗೆಂದು ಕೆರೆಗೆ ಹೋಗಿದ್ದ ತಂದೆ-ಮಗ ಸೇರಿ ಮೂವರು ನೀರುಪಾಲಾಗಿರುವ ಘಟನೆ ತುರುವೇಕೆರೆ ತಾಲೂಕಿನ ಮಾರಸಂದ್ರ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ನಡೆದಿದೆ. ರೇವಣ್ಣ(46), ಶರತ್ ಹಾಗೂ ದಯಾನಂದ ಮೃತರು. ದಂಡಿನ ಶಿವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹಗಳಿಗಾಗಿ ಶೋಧಕಾರ್ಯ ನಡೆಸಿ ಮೃತದೇಹಗಳನ್ನು ಹೊರ ತೆಗೆದಿದ್ದರು.
ಈ ಸುದ್ದಿಯನ್ನೂ ಓದಿ: Tumkur News: ಗಣೇಶ ಮೂರ್ತಿ ವಿಸರ್ಜನೆಗೆ ಕೆರೆಗೆ ಇಳಿದಿದ್ದ ತಂದೆ-ಮಗ ಸೇರಿ ಮೂವರು ನೀರುಪಾಲು