Saturday, 14th December 2024

ಬಿಜೆಪಿ ಅಭ್ಯರ್ಥಿಗಳ ಪರ ಚಿರಾಗ್ ಪಾಸ್ವಾನ್ ಪ್ರಚಾರ

ಪಾಟ್ನಾ: ಚಿರಾಗ್ ಪಾಸ್ವಾನ್ ‘ಎನ್ಡಿಎ ಮಿತ್ರ’ ಎಂದು ಪ್ರತಿಪಾದಿಸಿದ ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಅವರು ನವೆಂಬರ್ 3 ರಂದು ನಡೆಯುವ ರಾಜ್ಯದ ಮೊಕಾಮಾ ಮತ್ತು ಗೋಪಾಲ್ಗಂಜ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕೇಸರಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ಎಂದು ಶುಕ್ರವಾರ ಹೇಳಿದ್ದಾರೆ.
ಪಾಟ್ನಾದಲ್ಲಿ ಮಾತನಾಡಿದ ಜೈಸ್ವಾಲ್, ಜಮುಯಿ ಲೋಕಸಭಾ ಸದಸ್ಯ ಪಾಸ್ವಾನ್ ಅವರು ಮುಂದಿನ ವಾರ ಬಿಜೆಪಿ ಅಭ್ಯರ್ಥಿ ಗಳ ಪರ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.
ನಮ್ಮೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ ಮತ್ತು ರಾಷ್ಟ್ರಪತಿ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡಿದ ಎಲ್ಲಾ ಪಕ್ಷಗಳನ್ನು ನಾವು ಎನ್ಡಿಎ ಮಿತ್ರ ಪಕ್ಷಗಳು ಎಂದು ಪರಿಗಣಿಸುತ್ತೇವೆ. ಚಿರಾಗ್ ಪಾಸ್ವಾನ್ ಅವರು ಅ.31 ಮತ್ತು ನವೆಂಬರ್ 1 ರಂದು ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ” ಎಂದು ಜೈಸ್ವಾಲ್ ಹೇಳಿದ್ದಾರೆ.
ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ, ಚಿರಾಗ್ ಪಾಸ್ವಾನ್ ಅವರು ಕಳೆದ ವರ್ಷ ತಮ್ಮ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ಅವರ ಬಂಡಾಯದ ನಂತರ ತಮ್ಮ ತಂದೆ ಸ್ಥಾಪಿಸಿದ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥರಾಗಿದ್ದಾರೆ.