Sunday, 15th December 2024

ಚಿಟ್ ಫಂಡ್ ವಂಚನೆ ಪ್ರಕರಣ: ಚಾರ್ಜ್‌ಶೀಟ್‌ ಸಲ್ಲಿಕೆ

ನವದೆಹಲಿ: ಚಿಟ್ ಫಂಡ್ ವಂಚನೆ(191,18,90,089 ಕೋಟಿ ರೂಪಾಯಿ) ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ವ್ಯಕ್ತಿಗಳು ಮತ್ತು ನಾಲ್ಕು ಖಾಸಗಿ ಸಂಸ್ಥೆಗಳು ಸೇರಿದಂತೆ ಎಂಟು ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವುದಾಗಿ ಕೇಂದ್ರೀಯ ತನಿಖಾ ದಳ ತಿಳಿಸಿದೆ.

ಗೌತಮ್ ಕುಂದು, ನಿರ್ದೇಶಕ ಶಿಬಾಮೊಯ್ ದತ್ತಾ, ನಿರ್ದೇಶಕ ಅಶೋಕ್ ಕುಮಾರ್ ಸಹಾ, ರಾಮ್ ಲಾಲ್ ಗೋಸ್ವಾಮಿ, ರೋಸ್ ವ್ಯಾಲಿ ಹೋಟೆಲ್ ಮತ್ತು ಎಂಟರ್‌ಟೈನ್‌ ಮೆಂಟ್ ಲಿಮಿಟೆಡ್, ರೋಸ್ ವ್ಯಾಲಿ ರಿಯಲ್ ಎಸ್ಟೇಟ್ ಮತ್ತು ಕನ್‌ಸ್ಟ್ರಕ್ಷನ್ ಲಿಮಿಟೆಡ್, ಕೋಲ್ಕತ್ತಾ, ರೋಸ್ ವ್ಯಾಲಿ, ಇಂಡಸ್ಟ್ರೀಸ್, ಕೋಲ್ಕತ್ತಾ, ಮತ್ತು ರಿಯಲ್ ಎಸ್ಟೇಟ್ ಮತ್ತು ಲ್ಯಾಂಡ್‌ಬ್ಯಾಂಕ್ ಇಂಡಿಯಾ ಲಿಮಿಟೆಡ್ ವಿರುದ್ಧ ತ್ರಿಪುರಾದ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ರಿಯಲ್ ಎಸ್ಟೇಟ್ ವ್ಯವಹಾರಗಳ ಹೆಸರಿನಲ್ಲಿ ಪ್ರಮಾಣಪತ್ರಗಳನ್ನು ನೀಡಿ, ಅಪಾರ ಸಂಖ್ಯೆಯ ಹೂಡಿಕೆದಾರರಿಗೆ ಹೋಟೆಲ್‌ ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುವುದು, ಉದ್ಯಮ ಮತ್ತು ಭೂಮಿ ಅಭಿವೃದ್ಧಿ, ಸೆಬಿ ಮತ್ತು ಆರ್‌ಬಿಐ ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ದೇಶಕರು ಠೇವಣಿ ರೂಪದಲ್ಲಿ ಭಾರಿ ಸಾರ್ವಜನಿಕ ಹಣವನ್ನು ಸಂಗ್ರಹಿಸಿ ದ್ದರು.

ತ್ರಿಪುರಾ ಹೈಕೋರ್ಟ್‌ನ ಆದೇಶಕ್ಕೆ ಅನುಗುಣವಾಗಿ ಸಿಬಿಐ ಅಕ್ಟೋಬರ್ 18, 2019 ರಂದು ಪ್ರಕರಣವನ್ನು ದಾಖಲಿಸಿತ್ತು. ಈ ಹಿಂದೆ ಕುಮಾರ್‌ಘಾಟ್, ಅಗರ್ತಲಾ ಮತ್ತು ಇತರೆಡೆ ಶಾಖೆಗಳನ್ನು ಹೊಂದಿರುವ ಖಾಸಗಿ ಕಂಪನಿಯ ವಿರುದ್ಧ ಕುಮಾರ್‌ಘಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.