ನವದೆಹಲಿ: ಪ್ರವಾಹ ಪೀಡಿತ ಬಿಹಾರದಲ್ಲಿ ಪರಿಹಾರ ಕಿಟ್ ವಿತರಿಸುತ್ತಿದ್ದ ಭಾರತೀಯ ವಾಯುಪಡೆ(IAF) ಹೆಲಿಕಾಪ್ಟರ್ ತುರ್ತು ಭೂಸ್ಪರ್ಶದ ವೇಳೆ ಭಾರೀ ಅವಘಡ(Chopper Emergency Landing)ವೊಂದು ನಡೆದಿದೆ. ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ಅಧಿಕಾರಿಗಳು ಸೇರಿ ನಾಲ್ವರು ವಾಯುಪಡೆ ಸಿಬ್ಬಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
#WATCH | An Advanced Light Helicopter of the Indian Air Force made a precautionary landing in inundated area during flood relief operations in Muzaffarpur in the Sitamarhi sector of Bihar
— ANI (@ANI) October 2, 2024
According to IAF, the chopper had three personnel onboard including two pilots who are… pic.twitter.com/TLWGWNFJLv
ದರ್ಬಂಗಾ ವಾಯುನೆಲೆಯಿಂದ ಹೊರಟ ಹೆಲಿಕಾಪ್ಟರ್ ಮುಜಾಫರ್‌ಪುರದ ನಯಾ ಗಾಂವ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತು. ಭೂಸ್ಪರ್ಶ ಆಗುತ್ತಿದ್ದಂತೆ ಹೆಲಿಕಾಪ್ಟರ್‌ನ ಒಂದು ಭಾಗವು ಪ್ರವಾಹದಲ್ಲಿ ಮುಳುಗಿತು. ಪೈಲಟ್‌ನ ಚಾಣಾಕ್ಷತನದಿಂದ ಭಾರಿ ಅನಾಹುತ ತಪ್ಪಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರತ್ಯಯ ಅಮೃತ್ ತಿಳಿಸಿದ್ದಾರೆ. ಇಂಜಿನ್ ವಿಫಲವಾದಾಗ, ಪೈಲಟ್ ಹೆಲಿಕಾಪ್ಟರ್ ಆಳವಿಲ್ಲದ ನೀರಿನಲ್ಲಿ ಇಳಿಸಲು ಮುಂದಾಗಿದ್ದರ ಎಂದು ಅವರು ತಿಳಿಸಿದರು.
ಇನ್ನು ಘಟನೆಯಲ್ಲಿ ವಾಯುಪಡೆ ಸಿಬ್ಬಂದಿಗೆ ಸಣ್ಣಮಟ್ಟಿನ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಹೆಲಿಕಾಪ್ಟರ್ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH)-ಧ್ರುವ್ ಆಗಿದ್ದು, ಇದನ್ನು ಭಾರತೀಯ ವಾಯುಪಡೆ, ಸೇನೆ ಮತ್ತು ನೌಕಾಪಡೆಗಳು ಬಳಸುತ್ತವೆ.
ಬುಧವಾರ ಮುಂಜಾನೆ, ಪುಣೆಯಲ್ಲಿ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲಟ್‌ಗಳು ಮತ್ತು ಇಂಜಿನಿಯರ್ ಸಾವನ್ನಪ್ಪಿದ್ದರು. ದೆಹಲಿ ಮೂಲದ ಸಂಸ್ಥೆ ಹೆರಿಟೇಜ್ ಏವಿಯೇಷನ್‌ಗೆ ಸೇರಿದ ಹೆಲಿಟೇಜ್ ಮುಂಬೈಗೆ ತೆರಳುತ್ತಿತ್ತು ಮತ್ತು ದಟ್ಟವಾದ ಮಂಜಿನಿಂದಾಗಿ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ ಆದರೆ ನಿಜವಾದ ಕಾರಣವನ್ನು ಇನ್ನೂ ತಿಳಿದು ಬಂದಿಲ್ಲ.
ಇಂದು ಬೆಳಗ್ಗೆ 6.45ರ ಸುಮಾರಿಗೆ ಗುಡ್ಡಗಾಡು ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಪುಣೆಯ ಪಿಂಪ್ರಿ ಚಿಂಚ್‌ವಾಡ್ ಪೊಲೀಸರು ತಿಳಿಸಿದ್ದಾರೆ. “ಪುಣೆ ಜಿಲ್ಲೆಯ ಬವ್ಧಾನ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇದು ಯಾರ ಹೆಲಿಕಾಪ್ಟರ್ ಎಂದು ಇನ್ನೂ ತಿಳಿದಿಲ್ಲ ಎಂದು ಹಿರಿಯ ಇನ್ಸ್‌ಪೆಕ್ಟರ್ ಕನ್ಹಯ್ಯಾ ಥೋರಟ್ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಆಕ್ಸ್‌ಫರ್ಡ್ ಗಾಲ್ಫ್ ಕ್ಲಬ್‌ನ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಟೇಕಾಫ್ ಆಗಿದ್ದು, ಆ ಪ್ರದೇಶದಲ್ಲಿ ದಟ್ಟವಾದ ಮಂಜಿನಿಂದಾಗಿ ಅಪಘಾತ ಸಂಭವಿಸಿರಬಹುದು ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಈ ಸುದ್ದಿಯನ್ನೂ ಓದಿ: Ebrahim Raisi: ಇರಾನ್ ಮಾಜಿ ಅಧ್ಯಕ್ಷ ರೈಸಿ ಸಾವಿನ ರಹಸ್ಯ ಬಯಲು; ಹೆಲಿಕಾಪ್ಟರ್ ಪತನಕ್ಕೂ ಮುನ್ನ ನಡೆದಿತ್ತಾ ಪೇಜರ್ ಬ್ಲಾಸ್ಟ್?